ಐಪಿಎಲ್ 2023: ಪಂಜಾಬ್-ಕೆಕೆಆರ್ ಪಂದ್ಯಕ್ಕೆ ಫ್ಲಡ್ ಲೈಟ್ ಅಡ್ಡಿ

ಶನಿವಾರ, 1 ಏಪ್ರಿಲ್ 2023 (17:56 IST)
Photo Courtesy: Twitter
ಮೊಹಾಲಿ: ಐಪಿಎಲ್ 2023 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಫ್ಲಡ್ ಲೈಟ್ ಸಮಸ್ಯೆಯಾಗಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಸ್ವತಃ ನಾಯಕ ಶಿಖರ್ ಧವನ್ ಜವಾಬ್ಧಾರಿಯುತ ಆಟವಾಡಿ 40 ರನ್ ಗಳಿಸಿದರು. ಬಿ. ರಾಜಪಕ್ಸೆ ಅರ್ಧಶತಕ (50) ಸಿಡಿಸಿದರು. ಅಂತಿಮ ಹಂತದಲ್ಲಿ ಸ್ಯಾಮ್ ಕ್ಯುರೇನ್ ಬಿರುಸಿನ 26 ರನ್ ಗಳಿಸಿ ತಂಡಕ್ಕೆ ಬೃಹತ್ ಮೊತ್ತ ಕೊಡಿಸಲು ನೆರವಾದರು.

ಬಳಿಕ ಫ್ಲಡ್ ಲೈಟ್ ಸಮಸ್ಯೆಯಿಂದಾಗಿ ಎರಡನೇ ಇನಿಂಗ್ಸ್ ಕೊಂಚ ತಡವಾಗಿ ಆರಂಭವಾಗಿದೆ. ಇತ್ತೀಚೆಗಿನ ವರದಿ ಬಂದಾಗ ಕೆಕೆಆರ್ ಮೊದಲ ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 13 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ