ಕರ್ಮ ಸುಮ್ನೆ ಬಿಡಲ್ಲ ಭಾಯಿ! ಶೊಯೇಬ್ ಅಖ್ತರ್ ಗೆ ಟಾಂಗ್ ಕೊಟ್ಟ ಮೊಹಮ್ಮದ್ ಶಮಿ

ಭಾನುವಾರ, 13 ನವೆಂಬರ್ 2022 (17:42 IST)
ಮುಂಬೈ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಾಣುತ್ತಿದ್ದಂತೇ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ.

ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಾಗ ಪ್ರತಿಕ್ರಿಯಿಸಿದ್ದು ಶೊಯೇಬ್ ಅಖ್ತರ್, ‘ಭಾರತ ಸೆಮಿಫೈನಲ್ ವರೆಗೆ ಬಂದಿದ್ದು ವಿಶೇಷವಲ್ಲ. ಆದರೆ ಭಾರತ ತನ್ನ ದುರ್ಬಲ ಬೌಲಿಂಗ್ ಮತ್ತು ನಾಯಕತ್ವದ ಬಗ್ಗೆ ಚಿಂತನೆ ನಡೆಸಬೇಕು. ಸದ್ಯಕ್ಕೆ ಭಾರತ ತಂಡ ಅತ್ಯಂತ ಕಳಪೆಯಾಗಿದೆ. ಐಸಿಸಿ ಕೂಟಗಳಿಗೆ ಇಂತಹ ದುರ್ಬಲ ತಂಡ ಕಟ್ಟಿಕೊಂಡು ಬರಬಾರದು’ ಎಂದು ವ್ಯಂಗ್ಯ ಮಾಡಿದ್ದರು.

ಇದೀಗ ಪಾಕ್ ಫೈನಲ್ ನಲ್ಲಿ ಸೋತ ಬಳಿಕ ಟ್ವೀಟ್ ಮಾಡಿರುವ ಮೊಹಮ್ಮದ್ ಶಮಿ ‘ಸಾರಿ ಭಾಯಿ, ಕರ್ಮ ಸುಮ್ನೇ ಬಿಡಲ್ಲ’ ಎಂದಿದ್ದಾರೆ. ಶಮಿಯ ಈ ಕಾಮೆಂಟ್ ಭಾರೀ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ