IPL 2024: ಲಿಯೋ ಸ್ಟೈಲಲ್ಲಿ ಚೆನ್ನೈ ಕ್ಯಾಂಪ್ ಗೆ ಎಂಟ್ರಿ ಕೊಟ್ಟ ಧೋನಿ

Krishnaveni K

ಬುಧವಾರ, 6 ಮಾರ್ಚ್ 2024 (11:46 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ರಲ್ಲಿ ಭಾಗಿಯಾಗಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಂಪ್ ಗೆ ನಾಯಕ ಎಂಎಸ್ ಧೋನಿ ಸಖತ್ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದಾರೆ. ಧೋನಿಗೆ ಸಿಎಸ್ ಕೆ ಲಿಯೋ ಸಿನಿಮಾ ಸ್ಟೈಲಲ್ಲಿ ಸ್ವಾಗತ ಕೊಟ್ಟಿದೆ.

ಮಾರ್ಚ್ 22 ರಿಂದ ಐಪಿಎಲ್ 2024 ಆರಂಭವಾಗುತ್ತಿದೆ. ಮೊದಲ ಪಂದ್ಯ ಚೆನ್ನೈನಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿಎಸ್ ಕೆ ಕೆಲವು ಆಟಗಾರರು ಚೆನ್ನೈನಲ್ಲಿ ತರಬೇತಿ ಆರಂಭಿಸಿದ್ದಾರೆ. ಇದೀಗ ಧೋನಿ ಕೂಡಾ ತಂಡ ಕೂಡಿಕೊಂಡಿದ್ದಾರೆ.

ಧೋನಿ ಉದ್ದನೆಯ ಕೂದಲು ಬಿಟ್ಟುಕೊಂಡು ಸಖತ್ ಸ್ಟೈಲಿಶ್ ಆಗಿ ಸಿಎಸ್ ಕೆ ಪಾಳಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಈ ಹೇರ್ ಸ್ಟೈಲ್ ನೋಡಿದರೆ ಹಳೆಯ ಧೋನಿ ನೆನಪಾಗುತ್ತಾರೆ. ಧೋನಿ ಎಂಟ್ರಿಯನ್ನು ಸಿಎಸ್ ಕೆ ತಂಡ ವಿಶೇಷ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ಲಿಯೋ ಸಿನಿಮಾದಲ್ಲಿರುವಂತೆ ಧೋನಿ ಫೋಟೋವನ್ನು ಸಿಂಹದ ಪ್ರತಿಕೃತಿ ಇರುವ ವ್ಯಕ್ತಿ ಹೊಡೆದು ತೋರಿಸುವ ಮೂಲಕ ‘ತಲಾ’ ಆಗಮನವಾಗಿದೆ ಎಂದು ಸಿಎಸ್ ಕೆ ಘೋಷಿಸಿದೆ. ಧೋನಿ ಈಗಾಗಲೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಬಾರಿ ನಾನು ವಿಶಿಷ್ಟ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಭಿಮಾನಿಗಳ ಕಾತುರತೆ ಹೆಚ್ಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ