ಐಪಿಎಲ್ 2024: ವಿರಾಟ್ ಕೊಹ್ಲಿಗೆ 45 ಕೋಟಿ, ಬುಮ್ರಾಗೆ 35 ಕೋಟಿ ಸಂಭಾವನೆ!

ಗುರುವಾರ, 21 ಡಿಸೆಂಬರ್ 2023 (12:29 IST)
ಮುಂಬೈ: ಐಪಿಎಲ್ 2024 ರ ಹರಾಜಿನಲ್ಲಿ ಆಸ್ಟ್ರೇಲಿಯಾ ಮೂಲದ ವೇಗಿಯನ್ನು ಕೆಕೆಆರ್ ತಂಡ ದಾಖಲೆಯ 24.75 ಕೋಟಿ ರೂ.ಗೆ ಖರೀದಿಸಿದ ವಿಚಾರ ಈಗ ಭಾರೀ ಚರ್ಚೆಯಾಗುತ್ತಿದೆ.

ಎಂಟು ವರ್ಷಗಳಿಂದ ಐಪಿಎಲ್ ಆಡದ ವಿದೇಶೀ ವೇಗಿಗೆ ಇಷ್ಟೊಂದು ಬೇಡಿಕೆ ಎಂದಾದರೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಎಷ್ಟು ಸಂಭಾವನೆ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಶ್ನಿಸಿದ್ದರು.

ಅನಿಲ್ ಕುಂಬ್ಳೆ ಬೆನ್ನಲ್ಲೇ ಮತ್ತೊಬ್ಬ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡಾ ಇದೇ ರೀತಿಯ ಅಭಿಪ್ರಾಯ ಪಟ್ಟಿದ್ದಾರೆ. ಸ್ಟಾರ್ಕ್ ಗೆ ಅಷ್ಟೊಂದು ಬೆಲೆ ಎಂದಾದರೆ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ 45 ಕೋಟಿ ರೂ., ವೇಗಿ ಜಸ್ಪ್ರೀತ್ ಬುಮ್ರಾ 35 ಕೋಟಿ ಸಂಭಾವನೆ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಮಿಚೆಲ್ ಸ್ಟಾರ್ಕ್ ಎಲ್ಲಾ ಪಂದ್ಯಗಳನ್ನು ಆಡಿ ತಮ್ಮ ನಾಲ್ಕು ಓವರ್ ಗಳ ಕೋಟಾ ಪೂರ್ತಿ ಮಾಡಿದರೆ ಅವರಿಗೆ ಪ್ರತೀ ಬಾಲ್ ಗೆ 7,60,000 ರೂ. ಸಿಗಲಿದೆ. ಇದು ನಿಜಕ್ಕೂ ಅಚ್ಚರಿ. ಐಪಿಎಲ್ ನ ಬೆಸ್ಟ್ ಬೌಲರ್ ಯಾರು ಎಂದರೆ ಬುಮ್ರಾ ಎಂದು ನಿಸ್ಸಂಶಯವಾಗಿ ಹೇಳಬಹುದು. ಆದರೆ ಅವರಿಗೆ ಕೇವಲ 12 ಕೋಟಿ ಮತ್ತು ಸ್ಟಾರ್ಕ್ ಗೆ 25 ಕೋಟಿ ಸಂಭಾವನೆ. ಇದು ತಪ್ಪು. ನಾನು ಅಸೂಯೆಯಿಂದ ಹೇಳುತ್ತಿಲ್ಲ. ಆದರೆ ವೇತನ ಸಮನಾಗಿರಬೇಕು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ