ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದ ಕುಲದೀಪ್ ಯಾದವ್, ಜ್ಯಾಕ್ ಫ್ರೇಝರ್

Krishnaveni K

ಶನಿವಾರ, 13 ಏಪ್ರಿಲ್ 2024 (08:48 IST)
Photo Courtesy: Twitter
ನವದೆಹಲಿ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಗೆಲುವು ಸಾಧಿಸಿದೆ. ಕುಲದೀಪ್ ಯಾದವ್, ಜ್ಯಾಕ್ ಫ್ರೇಝರ್ ಮೆಗರ್ಕ್ ಅವರ ಆಟದ ನೆರವಿನಿಂದ ಡೆಲ್ಲಿ ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಕುಲದೀಪ್ ಯಾದವ್ ಬೌಲಿಂಗ್ ದಾಳಿಗೆ ಲಕ್ನೋ ಮಧ್ಯಮ ಕ್ರಮಾಂಕ ಹಳಿ ತಪ್ಪಿತು. 3 ಪ್ರಮುಖ ವಿಕೆಟ್ ಗಳನ್ನು ಕುಲದೀಪ್ ತಮ್ಮದಾಗಿಸಿಕೊಂಡರು. ಕೆಎಲ್ ರಾಹುಲ್ 39 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಆಯುಷ್ ಬದಾನಿ 55 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಚೊಚ್ಚಲ ಪಂದ್ಯವಾಡುತ್ತಿರುವ ಜ್ಯಾಕ್ ಫ್ರೇಝರ್ 55 ರನ್ ಸಿಡಿಸಿ ತಂಡದ ಗೆಲುವು ಸುಲಭವಾಗಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ರಿಷಬ್ ಪಂತ್ 41 ರನ್ ಗಳಿಸಿದರು. ಪೃಥ್ವಿ ಶಾ 32  ರನ್ ಗಳ ಕೊಡುಗೆ ನೀಡಿದರು.

ಲಕ್ನೋ ಪರ ರವಿ ಬಿಷ್ಣೋಯ್ 2, ನವೀನ್ ಉಲ್ ಹಕ್, ಯಶ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿದರು. 6 ಪಂದ್ಯಗಳಲ್ಲಿ 2 ಗೆಲುವು ಕಂಡಿರುವ ಡೆಲ್ಲಿ ಈಗ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಲಕ್ನೋ 5 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ