ಐಪಿಎಲ್ 2024: ಸಿಎಸ್ ಕೆ ವಿರುದ್ಧ ಗೆಲುವಿನ ಬಳಿಕ ಮೈಮರೆತು ಬೆಳಗಿನ ಜಾವದವರೆಗೆ ಆರ್ ಸಿಬಿ ಪಾರ್ಟಿ
ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆಯುತ್ತಿದ್ದಂತೇ ಆರ್ ಸಿಬಿ ಆಟಗಾರರು ಫೈನಲ್ ಗೆದ್ದಂತೆ ಕುಣಿದಾಡಿದ್ದರು. ಅವರ ಈ ಮಟ್ಟಿಗಿನ ಸಂಭ್ರಮಾಚರಣೆ ಟೀಕೆಗೆ ಗುರಿಯಾಗಿತ್ತು. ಆದರೆ ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ ಕೇವಲ ಮೈದಾನದಲ್ಲಿ ಮಾತ್ರವಲ್ಲ, ಹೊರಗೆಯೂ ಮುಂದುವರಿದಿತ್ತು ಎನ್ನಲಾಗಿದೆ.
ಆರ್ ಸಿಬಿ ಬೌಲರ್ ಯಶ್ ದಯಾಳ್ ತಂದೆ ಈ ವಿಚಾರವನ್ನು ಹೊರಹಾಕಿದ್ದಾರೆ. ಚೆನ್ನೈ ಸೋಲಿಸಿದ ಬಳಿಕ ಆರ್ ಸಿಬಿ ಆಟಗಾರರು ಭಾರೀ ಸಂತೋಷದಲ್ಲಿದ್ದರು. ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಟಿ ಮಾಡಿ ಸಂತೋಷಪಟ್ಟರು ಎಂದು ಹೇಳಿದ್ದಾರೆ.
ಆದರೆ ಅವರ ಈ ಹೇಳಿಕೆಯೇ ಈಗ ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆ ರೀತಿ ಮೈಮರೆತಿದ್ದಕ್ಕೇ ಮುಂದಿನ ಪಂದ್ಯದಲ್ಲಿ ಸೋತು ಕೂಟದಿಂದ ನಿರ್ಗಮಿಸುವ ಪರಿಸ್ಥಿತಿ ಬಂದಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಹಮ್ಮದಾಬಾದ್ ನಲ್ಲಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಆರ್ ಸಿಬಿ ಸೋಲು ಅನುಭವಿಸಿತು.