ಐಪಿಎಲ್ 2024: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್

Krishnaveni K

ಭಾನುವಾರ, 31 ಮಾರ್ಚ್ 2024 (15:37 IST)
ಅಹಮ್ಮದಾಬಾದ್: ಐಪಿಎಲ್ 2024 ರ ಇಂದಿನ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ ದಾಖಲೆಯ ಮೊತ್ತ ಪೇರಿಸಿತ್ತು. ಇದೀಗ ಮತ್ತೊಮ್ಮೆ ಹೈದರಾಬಾದ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಮೊದಲ ಪಂದ್ಯ ಸೋತಿದ್ದ ಹೈದರಾಬಾದ್ ಕಳೆದ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.

ಆದರೆ ಇದುವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಆಯಾ ಮೈದಾನದಲ್ಲಿ ತವರಿನ ತಂಡಗಳೇ ಗೆಲುವು ಕಂಡಿದ್ದು ಹೆಚ್ಚು. ಹೀಗಾಗಿ ಗುಜರಾತ್ ಕೂಡಾ ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ತಂಡ ಸೋಲು ಅನುಭವಿಸಿತ್ತು. ಮೊದಲ ಪಂದ್ಯವನ್ನು ಶುಬ್ಮನ್ ಗಿಲ್ ಪಡೆ ಗೆದ್ದುಕೊಂಡಿತ್ತು.

ಸನ್ ರೈಸರ್ಸ್ ಹೈದರಾಬಾದ್ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ. ಆದರೆ ಗುಜರಾತ್  ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಸ್ಪೆನ್ಸರ್ ಜಾನ್ಸನ್ ಸ್ಥಾನಕ್ಕೆ ನೂರ್ ಅಹಮ್ಮದ್ ಮತ್ತು ದರ್ಶನ್ ನಲ್ಕಂಡೆ ಬದಲಿಗೆ ಸಾಯಿ ಕಿಶೋರ್ ಗೆ ಅವಕಾಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ