IND vs ENG: ಶುಬ್ಮನ್ ಗಿಲ್ ಶತಕ ಪೂರೈಸಿದಾಗ ತನಗಿಂತ ಹೆಚ್ಚು ಖುಷಿಪಟ್ಟ ರೋಹಿತ್ ಶರ್ಮಾ

Krishnaveni K

ಶುಕ್ರವಾರ, 8 ಮಾರ್ಚ್ 2024 (12:34 IST)
Photo Courtesy: Twitter
ಧರ್ಮಶಾಲಾ: ಟೀಂ ಇಂಡಿಯಾ ನಾಯಕರಾದ ಬಳಿಕ ರೋಹಿತ್ ಶರ್ಮಾ ಗರಡಿಯಲ್ಲಿ ಪಳಗಿದ ಪ್ರತಿಭೆಗಳಲ್ಲಿ ಶುಬ್ಮನ್ ಗಿಲ್ ಕೂಡಾ ಒಬ್ಬರು. ಯಶಸ್ವಿ ಜೈಸ್ವಾಲ್ ಮತ್ತು ಗಿಲ್ ರನ್ನು ರೋಹಿತ್ ಸದಾ ಬೆಂಬಲಿಸುತ್ತಾರೆ. ಇದನ್ನು ಅವರು ಇಂದು ಗಿಲ್ ಶತಕ ಪೂರೈಸಿದಾಗಲೂ ಸಾಬೀತುಪಡಿಸಿದರು.

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನ ಮೊದಲು ರೋಹಿತ್ ಶರ್ಮಾ ಶತಕ ಸಿಡಿಸಿದರು. ನಂತರ ಎರಡೇ ಬಾಲ್ ಗಳ ಅಂತರದಲ್ಲಿ ಶುಬ್ಮನ್ ಗಿಲ್ ಕೂಡಾ ಶತಕ ಪೂರೈಸಿದರು. ಆದರೆ ರೋಹಿತ್ ತಾವು ಶತಕ ಗಳಿಸಿದಾಗ ಎಂದಿನಂತೇ ಬ್ಯಾಟ್ ಮಾತ್ರ ಮೇಲೆತ್ತಿ ಸಾಮಾನ್ಯ ಸೆಲೆಬ್ರೇಷನ್ ಮಾಡಿದರು.

ಆದರೆ ಎರಡೇ ಎಸೆತಗಳ ಬಳಿಕ ಶುಬ್ಮನ್ ಗಿಲ್ ಬೌಂಡರಿ ಬಾರಿಸಿ ಶತಕ ಪೂರೈಸಿದಾಗ ರೋಹಿತ್ ತಾವು ಶತಕ ಪೂರೈಸಿದಾಗ ಮಾಡಿದ್ದಕ್ಕಿಂತಲೂ ಹೆಚ್ಚು ಸಂಭ್ರಮಪಟ್ಟರು. ಗಿಲ್ ಬಳಿ ಓಡಿ ಹೋಗಿ ಬಿಗಿದಪ್ಪಿ ಶಹಬ್ಬಾಶ್ ನೀಡಿದರು. ಇದನ್ನು ನೋಡಿ ಅಭಿಮಾನಿಗಳು ಗಾಡ್ ಫಾದರ್ ಎಂದರೆ ಹೀಗಿರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಮತ್ತು ಶುಬ್ಮನ್ ಗಿಲ್ ಗೆ ರೋಹಿತ್ ಸದಾ ಬೆಂಬಲ ಕೊಡುತ್ತಲೇ ಬಂದಿದ್ದಾರೆ. ಇಬ್ಬರಿಗೂ ತಂಡದಲ್ಲಿ ಖಾಯಂ ಸ್ಥಾನ ಸಿಗಲು ರೋಹಿತ್ ಕೊಟ್ಟ ಬೆಂಬಲವೂ ಕಾರಣ. ಇದನ್ನು ಇಬ್ಬರೂ ತಮ್ಮ ಭರ್ಜರಿ ಪ್ರದರ್ಶನದ ಮೂಲಕ ಉಳಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ