ಐಪಿಎಲ್ 2024: ಕೆಎಲ್ ರಾಹುಲ್ ಟಾಸ್ ಗೆ ಅಲಭ್ಯರಾಗಲು ಕಾರಣ ನೀಡಿದ ನಿಕಲಸ್ ಪೂರನ್

Krishnaveni K

ಭಾನುವಾರ, 31 ಮಾರ್ಚ್ 2024 (08:45 IST)
ಲಕ್ನೋ: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಟಾಸ್ ಗೆ ಬರದೇ ಇದ್ದಾಗ ಎಲ್ಲರಿಗೂ ಆತಂಕವಾಗಿತ್ತು. ಅದಕ್ಕೆ ಕಾರಣವೆನೆಂದು ನಿಕಲಸ್ ಪೂರನ್ ಹೇಳಿದ್ದಾರೆ.

ಟಾಸ್ ಸಂದರ್ಭದಲ್ಲಿ ಸಾಮಾನ್ಯವಾಗಿ ತಂಡದ ನಾಯಕರು ಉಪಸ್ಥಿತರಿರಬೇಕು. ಆದರೆ ಕೆಎಲ್ ರಾಹುಲ್ ಗೈರಾಗಿದ್ದರು. ಹೀಗಾಗಿ ಅವರಿಗೆ ಮತ್ತೆ ಗಾಯವಾಯಿತೇ ಎಂದು ಎಲ್ಲರಿಗೂ ಅಚ್ಚರಿಯಾಯಿತು. ಯಾಕೆಂದರೆ ರಾಹುಲ್ ಈಗಷ್ಟೇ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಕ್ರಿಕೆಟ್ ಗೆ ಮರಳಿದ್ದರು.

ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ರಾಹುಲ್ ಫಿಟ್ ಆಗಿರುವುದು ಮುಖ್ಯವಾಗಿದೆ. ಈ ಐಪಿಎಲ್ ನಲ್ಲಿ ಅವರು ಕೀಪಿಂಗ್ ಮಾಡುವುದು ಅನುಮಾನ ಎನ್ನಲಾಗಿತ್ತು. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಕೀಪಿಂಗ್ ಮಾಡಿದ್ದರು. ಹೀಗಾಗಿ ರಿಸ್ಕ್ ತೆಗೆದುಕೊಂಡು ಗಾಯ ಮಾಡಿಕೊಂಡರೇ ಎಂದು ಎಲ್ಲರಿಗೂ ಅನುಮಾನವಾಗಿತ್ತು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಕಲಸ್ ಪೂರನ್ ‘ರಾಹುಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರೆ. ಅವರು ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ. ಮುಂದೆ ಟೂರ್ನಮೆಂಟ್ ಸುದೀರ್ಘ ಅವಧಿಯದ್ದಾಗಿದೆ. ಹೀಗಾಗಿ ರಿಸ್ಕ್ ಬೇಡವೆಂದು ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದಾರೆ’ ಎಂದಿದ್ದಾರೆ. ಹೀಗಾಗಿ ಈ ಐಪಿಎಲ್ ನಲ್ಲಿ ರಾಹುಲ್ ರಿಸ್ಕ್ ತೆಗೆದುಕೊಂಡು ಆಡುತ್ತಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ