IPL 2025: ನೋಟ್ ಬುಕ್ ಸೆಲೆಬ್ರೇಷನ್ ತಂದ ಆಪತ್ತು, ದಿಗ್ವೇಶ್ ರಾಠಿ ಅಮಾನತು

Krishnaveni K

ಮಂಗಳವಾರ, 20 ಮೇ 2025 (11:45 IST)
ಲಕ್ನೋ: ಐಪಿಎಲ್ 2025 ರಲ್ಲಿ ನೋಟ್ ಬುಕ್ ಸೆಲೆಬ್ರೇಷನ್ ಮೂಲಕ ಸುದ್ದಿಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಾಠಿಯನ್ನು ಈಗ ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ.

ಈ ಐಪಿಎಲ್ ನಲ್ಲಿ ಯುವ ವೇಗಿ ವಿಕೆಟ್ ಪಡೆದಿದ್ದಕ್ಕಿಂತ ಸೆಲೆಬ್ರೇಷನ್ ಅಬ್ಬರದ ಮೂಲಕವೇ ಸುದ್ದಿಯಾದವರು. ನಿನ್ನೆಯ ಪಂದ್ಯದಲ್ಲೂ ಅಭಿಷೇಕ್ ಶರ್ಮಾರನ್ನು ಔಟ್ ಮಾಡಿದ ಬಳಿಕ ಇದೇ ರೀತಿ ಸೆಲೆಬ್ರೇಷನ್ ಮಾಡಿದ್ದಾರೆ.

ಇದರಿಂದ ಕೆರಳಿದ ಅಭಿಷೇಕ್ ಶರ್ಮಾ ಜುಟ್ಟು ತೋರಿಸಿ ಗುದ್ದಿ ಬಿಡ್ತಿನಿ ಎನ್ನುವಂತೆ ಸನ್ನೆ ಮಾಡಿದ್ದಾರೆ. ಇಬ್ಬರ ನಡುವೆ ವಾಗ್ವಾದ ಜೋರಾಗಿದ್ದು ಬಳಿಕ ಅಂಪಾಯರ್ ಮಧ್ಯಪ್ರವೇಶಿಸಿ ಸರಿಪಡಿಸಿದ್ದಾರೆ. ಆದರೆ ಇದು ಇಷ್ಟಕ್ಕೇ ನಿಂತಿಲ್ಲ.

ದಿಗ್ವೇಶ್ ವರ್ತನೆಗೆ ಈ ಹಿಂದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ರನ್ನು ಔಟ್ ಮಾಡಿ ಇದೇ ರೀತಿ ವರ್ತನೆ ತೋರಿದ್ದಕ್ಕೆ 50 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಮತ್ತೊಮ್ಮೆ ತಪ್ಪು ಪುನರಾವರ್ತನೆ ಮಾಡಿದ್ದಕ್ಕೆ ಇದೀಗ ಅವರಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಮುಂದಿನ ಪಂದ್ಯಕ್ಕೆ ದಿಗ್ವೇಶ್ ರನ್ನು ಹೊರಗಿಡುವಂತೆ ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ