IPL 2025: ಪಂದ್ಯ ರದ್ದಾದರೂ ಪ್ಲೇಆಫ್‌ನತ್ತ ದಾಪುಗಾಲಿಟ್ಟ ಆರ್‌ಸಿಬಿ: ಹಾಲಿ ಚಾಂಪಿಯನ್‌ ಕೆಕೆಆರ್‌ ಔಟ್‌

Sampriya

ಭಾನುವಾರ, 18 ಮೇ 2025 (14:14 IST)
Photo Courtesy X
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳ ನಡುವಿನ ಪಂದ್ಯ ಮಳೆಯಲ್ಲಿ ಕೊಚ್ಚಿಹೋಯಿತು. ಆದರೆ, ಆರ್‌ಸಿಬಿ ತಂಡವು ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಯಿತು.

ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ ಶನಿವಾರ ಆರಂಭವಾಯಿತು. ಆದರೆ, ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಇದು ಆರ್‌ಸಿಬಿಗೆ ಕೊಂಚ ವರವಾದರೂ, ಕೋಲ್ಕತ್ತ ತಂಡದ ಪ್ಲೇ ಆಫ್‌ ಕನಸಿಗೆ ಎಳ್ಳುನೀರು ಬಿಡುವಂತಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಭಾರಿ ಮಳೆಯಿಂದಾಗಿ ರದ್ದಾಯಿತು. ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಹಂಚಿಕೆ ಮಾಡಲಾಗಿದೆ. ಈ ಮೂಲಕ 17 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಪ್ಲೇಆಫ್‌ನತ್ತ ದಾಪುಗಾಲಿಟ್ಟಿತು. ಮತ್ತೊಂದೊಂಡೆ ಹಾಲಿ ಚಾಂಪಿಯನ್‌ ಟೂರ್ನಿಯಿಂದ ಹೊರಬಿತ್ತು.
 

ಕೋಲ್ಕತ್ತ ತಂಡದ ವಿರುದ್ಧ ಆರ್‌ಸಿಬಿ ಗೆದ್ದಿದ್ದರೆ ಭಾರತದ ಪ್ಲೇಆಫ್‌ ಸ್ಥಾನ ಬಹುತೇಕ ಖಚಿತವಾಗಿರುತ್ತಿತ್ತು.  ಆದರೆ ಮಳೆಯಿಂದ ಪಂದ್ಯ ರದ್ದಾಗಿದ್ದು ಆರ್ ಸಿಬಿಗೆ ಖುಷಿಯಾಗಿಲ್ಲವಾದರೂ ಬೇಸರವೇನೂ ಆಗಿಲ್ಲ. ಇನ್ನೂ ಆಗ್ರ ಎರಡು ಸ್ಥಾನದಲ್ಲಿ ಪ್ಲೇಆಫ್ ತಲುಪಲು ಆರ್ ಸಿಬಿಗೆ ಅವಕಾಶ ಇರುವುದು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದರ ಮೇಲೆ ಗಮನ ಹರಿಸಬೇಕಿದೆ.

ಆರ್‌ಸಿಬಿ ತಂಡಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಇದೆ. ಮೇ 23ರಂದು ಆರ್‌ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮೇ 27 ರಂದು ಮಂಗಳವಾರ ಆರ್ ಸಿಬಿ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ