IPL 2025: ಮೈದಾನಕ್ಕೆ ನುಗ್ಗಿ ರಿಯಾನ್ ಪರಾಗ್ ಕಾಲಿಗೆ ಬಿದ್ದ ಅಭಿಮಾನಿ: ವಿಡಿಯೋ ನೋಡಿ
ರಾಜಸ್ಥಾನ್ ರಾಯಲ್ಸ್ ನಿನ್ನೆಯ ಪಂದ್ಯವನ್ನು 8 ವಿಕೆಟ್ ಗಳಿಂದ ಸೋತಿದೆ. ಮೊದಲ ಪಂದ್ಯವನ್ನು ಸೋತಿದ್ದ ಕೆಕೆಆರ್ ಈಗ ಎರಡನೇ ಪಂದ್ಯದಲ್ಲಿ ಗೆಲುವು ಕಂಡಿತು. ಇತ್ತ ರಾಜಸ್ಥಾನ್ ಸತತ ಎರಡನೇ ಸೋಲು ಕಂಡಂತಾಯಿತು.
ಈ ಪಂದ್ಯದಲ್ಲಿ ಕೆಕೆಆರ್ ಇನಿಂಗ್ಸ್ ವೇಳೆ 12 ನೇ ಓವರ್ ನಲ್ಲಿ ರಿಯಾನ್ ಪರಾಗ್ ರನ್ನು ನೋಡಲು ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ಸಾಮಾನ್ಯವಾಗಿ ಧೋನಿ, ಕೊಹ್ಲಿ, ರೋಹಿತ್ ಗೆ ಈ ರೀತಿಯ ಅಭಿಮಾನಿಗಳಿರುತ್ತಾರೆ. ಆದರೆ ಯುವ ಆಟಗಾರ ರಿಯಾನ್ ಪರಾಗ್ ರನ್ನು ಭೇಟಿ ಮಾಡಲು ಮೈದಾನಕ್ಕೆ ಬಂದಿರುವುದು ವಿಶೇಷ.
ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿದ್ದ ರಿಯಾನ್ ಪರಾಗ್ ಪಿಚ್ ಬಳಿಯಿದ್ದಾಗ ಬಂದ ಅಭಿಮಾನಿ ಕಾಲಿಗೆ ಬಿದ್ದಿದ್ದಾನೆ. ಬೌಲಿಂಗ್ ಗೆ ಹೊರಟಿದ್ದ ರಿಯಾನ್ ಪರಾಗ್ ಅಭಿಮಾನಿಯ ವರ್ತನೆಯಿಂದ ಗಲಿಬಿಲಿಯಾಗಿದ್ದಾರೆ. ಬಳಿಕ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕರೆದೊಯ್ದಿದ್ದಾರೆ.