IPL 2025 KKR vs RCB: ಮೊದಲ ಪಂದ್ಯಕ್ಕೆ ಮಳೆ ಬರುತ್ತಾ, ಈಡನ್ ಗಾರ್ಡನ್ ನಲ್ಲಿ ಈಗಿನ ಸ್ಥಿತಿ ಹೇಗಿದೆ

Krishnaveni K

ಶನಿವಾರ, 22 ಮಾರ್ಚ್ 2025 (16:04 IST)
Photo Credit: X
ಕೋಲ್ಕತ್ತಾ: ಐಪಿಎಲ್ 2025 ರ ಉದ್ಘಾಟನಾ ಪಂದ್ಯದಲ್ಲಿ ಇಂದು ಆರ್ ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಮೊದಲ ಪಂದ್ಯಕ್ಕೆ ಮಳೆ ಭೀತಿಯಿದ್ದು, ಇದೀಗ ಈಡನ್ ಗಾರ್ಡನ್ ಮೈದಾನದಲ್ಲಿ ಹವಾಮಾನ ಹೇಗಿದೆ ಇಲ್ಲಿದೆ ವಿವರ.

ಈಡನ್ ಗಾರ್ಡನ್ ನಲ್ಲಿ ಇಂದು ಮೊದಲ ಪಂದ್ಯಕ್ಕೆ ಮಳೆ ಭೀತಿಯಿದೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿದ್ದವು. ನಿನ್ನೆಯೂ ಇಲ್ಲಿ ಮಳೆ ಸುರಿದಿತ್ತು.ಹಾಗಾಗಿ ಇಂದಿನ ಪಂದ್ಯ ನಡೆಯುವುದೋ ಎಂಬ ಆತಂಕವಿತ್ತು.

ಈ ನಡುವೆ ಇದೀಗ ಈಡನ್ ಗಾರ್ಡನ್ ಮೈದಾನದ ಸುತ್ತ ದಟ್ಟ ಮೋಡ ಕವಿದ ವಾತಾವರಣವಿದ್ದು, ಮಳೆಯ ಸೂಚನೆಯಿದೆ. ಆದರೆ ಸದ್ಯಕ್ಕೆ ಮಳೆ ಸುರಿಯುತ್ತಿಲ್ಲ. ಹೀಗಾಗಿ ಉದ್ಘಾಟನಾ ಸಮಾರಂಭ ನಡೆಯಬಹುದು.

ಆದರೆ ನಂತರ ರಾತ್ರಿ ವೇಳೆ ಮಳೆ ಸುರಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಕಾರ್ಮೋಡ ಕವಿದಿದೆ. ಇಂದಿನ ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ