IPL 2025: ಸೀಸನ್‌ನ ಮೊದಲ ಪಂದ್ಯ ಮಳೆಯಿಂದ ರದ್ದಾಗುವ ಸಾಧ್ಯತೆ

Sampriya

ಶನಿವಾರ, 22 ಮಾರ್ಚ್ 2025 (15:22 IST)
Photo Courtesy X
ಬೆಂಗಳೂರು: ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಆರಂಭಿಕ ಪಂದ್ಯವು ಮಳೆಯಿಂದ ರದ್ದಾಗುವ ಅಪಾಯದಲ್ಲಿದೆ. ಇದೀಗ ಮೊದಲ ಪಂದ್ಯವನ್ನು ನೋಡುವ ಖುಷಿಯಲ್ಲಿರುವ ಕ್ರೀಡಾ ಪ್ರೇಮಿಗಳಿಗೆ ಮಳೆಯಿಂದಾಗಿ ಅದು ರದ್ದಾಗುವ ಭಯವೂ ಇದೆ.

ಕೋಲ್ಕತ್ತಾದ ಹವಾಮಾನ ಪ್ರಕಾರ, ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳಿರುವುದರಿಂದ ಮಳೆ ರದ್ದಾಗುವ ಸಾಧ್ಯತೆಯಿದೆ.

ಶುಕ್ರವಾರ, ತಂಡಗಳ ತರಬೇತಿ ಅವಧಿಗಳು ಸಹ ಹವಾಮಾನದ ಕಾರಣದಿಂದಾಗಿ ಹಾನಿಗೊಳಗಾದವು, ಸಂಜೆ ಮಳೆಯ ನಂತರ ಎರಡೂ ತಂಡಗಳು ತಮ್ಮ ಪೂರ್ವ-ಪಂದ್ಯದ ದಿನಚರಿಗಳನ್ನು ಮಧ್ಯದಲ್ಲಿ ಕೈಬಿಡಬೇಕಾಯಿತು.

ಇನ್ನೂ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರಾದ ಕರಣ್ ಔಜ್ಲಾ, ದಿಶಾ ಪಟಾನಿ ಮತ್ತು ಶ್ರೇಯಾ ಘೋಶಲ್ ಮನರಂಜಿಸಲಿದ್ದಾರೆ. ಒಂದು ವೇಳೆ ಮಳೆಯಾದರೆ ಇದೆಲ್ಲವೂ ನಿಲ್ಲುವ ಸಾಧ್ಯತೆಯಿದೆ.  ಪಂದ್ಯವು ಮಳೆಯಿಂದ ರದ್ದಾಗಿದರೆ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ