IPL 2025 RCBvsDC: ಫಿಲಿಪ್ ಸಾಲ್ಟ್ ಬದಲು ನೀವೇ ಔಟಾಗಬಹುದಿತ್ತು: ಕೊಹ್ಲಿ ಮೇಲೆ ಫ್ಯಾನ್ಸ್ ಸಿಟ್ಟು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆರ್ ಸಿಬಿಗೆ ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದ್ದರು. ತಂಡ 5 ಓವರ್ ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 50 ರನ್ ದಾಟಿತ್ತು. ಸಾಲ್ಟ್ 17 ಎಸೆತಗಳಿಂದ 3 ಸಿಕ್ಸರ್ ಸಹಿತ 37 ರನ್ ಮಾಡಿದ್ದರು.
ಈ ವೇಳೆ ಕವರ್ಸ್ ಕಡೆಗೆ ಚೆಂಡು ಹೊಡೆದ ಫಿಲಿಪ್ ಸಾಲ್ಟ್ ರನ್ ಗಾಗಿ ಓಡಿದ್ದರು. ಅವರಿಗಿಂತ ಮೊದಲೇ ಕೊಹ್ಲಿ ಕೂಡಾ ಓಡಿ ಮಧ್ಯದ ಪಿಚ್ ವರೆಗೆ ತಲುಪಿದ್ದರು. ಈ ವೇಳೆ ಕೊಹ್ಲಿ ಬೇಗನೇ ಓಡಿ ನಾನ್ ಸ್ಟ್ರೈಕರ್ ಎಂಡ್ ತಲುಪಿ ಬಚಾವ್ ಮಾಡಿಕೊಂಡಿದ್ದರು. ಆದರೆ ಸಾಲ್ಟ್ ರನೌಟ್ ಆದರು.
ಈ ರನೌಟ್ ಗೆ ಅಭಿಮಾನಿಗಳು ಕೊಹ್ಲಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹೇಗೂ ಕೊಹ್ಲಿ ರನ್ ಗಳಿಸಲು ಪರದಾಡುತ್ತಿದ್ದರು. ಸಾಲ್ಟ್ ಗಾಗಿ ತಮ್ಮ ವಿಕೆಟ್ ನ್ನೇ ಅವರು ಬಲಿ ಕೊಡಬಹುದಿತ್ತು. ಆದರೆ ಅವರು ತಮ್ಮ ವಿಕೆಟ್ ಉಳಿಸುವ ಮೂಲಕ ತಮ್ಮ ತವರು ಡೆಲ್ಲಿ ತಂಡಕ್ಕೆ ಉಪಕಾರ ಮಾಡಿದರು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.