Jasprit Bumrah: ಕೆಳಗೆ ಬಿದ್ದು ಚಡಪಡಿಸುತ್ತಿದ್ದರೂ ಅಭಿನವ್ ಮನೋಹರ್ ಕಡೆ ತಿರುಗಿಯೂ ನೋಡದ ಜಸ್ಪ್ರೀತ್ ಬುಮ್ರಾ
ನಿನ್ನೆಯ ಪಂದ್ಯದಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಿದ್ದಾಗ ಬಾಲ್ ತಾಗಿ ಅಭಿನವ್ ಮನೋಹರ್ ಕೆಳಗೆ ಕೂತು ನೋವು ಅನುಭವಿಸುತ್ತಿದ್ದರು. ಸಾಮಾನ್ಯವಾಗಿ ಇಂಥಹ ಸಂದರ್ಭದಲ್ಲಿ ಎದುರಾಳಿ ಆಟಗಾರರಾಗಿದ್ದರೂ ಕ್ಷೇಮ ವಿಚಾರಿಸುತ್ತಾರೆ.
ಆದರೆ ಬುಮ್ರಾ ನೋವಿನಿಂದ ಒದ್ದಾಡುತ್ತಿದ್ದ ಯುವ ಬ್ಯಾಟಿಗ ಅಭಿನವ್ ಮನೋಹರ್ ಕಡೆಗೆ ತಿರುಗಿಯೂ ನೋಡದೇ ತಮ್ಮ ಪಾಡಿಗೆ ತಾವು ಬೌಲಿಂಗ್ ರನ್ ಅಪ್ ಕಡೆಗೆ ಸಾಗಿದ್ದಾರೆ. ಅವರ ಈ ಫೋಟೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಮ್ರಾಗೆ ಮಾನವೀಯತೆ ಇಲ್ಲವೇ? ಹಿರಿಯ ಬೌಲರ್ ಆಗಿ ಎದುರಾಳಿ ಆಟಗಾರ ನೋವಿನಿಂದ ಒದ್ದಾಡುವಾಗ ಏನಾಯ್ತು ಎಂದು ಕೇಳುವ ಸೌಜನ್ಯವೂ ಇಲ್ಲವೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.