ಟೀಂ ಇಂಡಿಯಾ ಕ್ರಿಕೆಟಿಗರ ಗಾಯಕ್ಕೆ ಐಪಿಎಲ್ ಕಾರಣ: ಆಸೀಸ್ ಕೋಚ್
ಗುರುವಾರ, 14 ಜನವರಿ 2021 (09:44 IST)
ಸಿಡ್ನಿ: ಆಸ್ಟ್ರೇಲಿಯಾ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಇಷ್ಟೊಂದು ಪ್ರಮಾಣದಲ್ಲಿ ಗಾಯಗೊಂಡು ಸರಣಿಯಿಂದ ಹೊರನಡೆಯುತ್ತಿರುವುದಕ್ಕೆ ತಡವಾಗಿ ಆಯೋಜನೆಯಾದ ಐಪಿಎಲ್ ಕಾರಣ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ದೂರಿದ್ದಾರೆ.
ಐಪಿಎಲ್ ತಡವಾಗಿ ಆಯೋಜನೆಯಾಗಿತ್ತು. ಈ ಕೂಟ ಮುಗಿದ ತಕ್ಷಣವೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿತ್ತು. ಈ ಒತ್ತಡದ ವೇಳಾಪಟ್ಟಿಗೆ ಹೊಂದಿಕೊಳ್ಳಲಾಗದೇ ಆಟಗಾರರು ಇಷ್ಟೊಂದು ಪ್ರಮಾಣದಲ್ಲಿ ಗಾಯಾಳುಗಳಾಗುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ಕೋಚ್ ಅಭಿಪ್ರಾಯಪಟ್ಟಿದ್ದಾರೆ.