Kerala Murder: ಕೇರಳದಲ್ಲಿ ಬೆಚ್ಚಿಬೀಳಿಸುವ ಹತ್ಯಾಕಾಂಡ: ಅಜ್ಜಿ, ಗರ್ಲ್ ಫ್ರೆಂಡ್ ಸೇರಿದ 5 ಮಂದಿ ಕೊಂದ ಪಾಪಿ

Krishnaveni K

ಮಂಗಳವಾರ, 25 ಫೆಬ್ರವರಿ 2025 (10:40 IST)
Photo Credit: X
ತಿರುವನಂತರಪುರಂ: ಕೇರಳದಲ್ಲಿ ಬೆಚ್ಚಿಬೀಳಿಸುವ ಹತ್ಯಾಕಾಂಡವೊಂದು ನಡೆದಿದೆ. ಅಜ್ಜಿ, ಗರ್ಲ್ ಫ್ರೆಂಡ್ ಸೇರಿದಂತೆ ಪಾಪಿಯೊಬ್ಬ 5 ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.

23 ವರ್ಷದ ಅಫಾನ್ ಆರೋಪಿ. ಈತ ತನ್ನ ಅಜ್ಜಿ, 13 ವರ್ಷದ ಸಹೋದರ, ಗರ್ಲ್ ಫ್ರೆಂಡ್ ಸೇರಿದಂತೆ ಒಟ್ಟು 6 ಮಂದಿಯನ್ನು ಕೊಲೆಗೆ ಯತ್ನಿಸಿದ್ದಾನೆ. ಈ ಪೈಕಿ ಐವರು ಸಾವನ್ನಪ್ಪಿದ್ದು ತಾಯಿ ಮಾತ್ರ ಗಂಭೀರ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ.

ಸರಣಿ ಹತ್ಯೆ ಮಾಡಿದ ಬಳಿಕ ಆರೋಪಿ ಅಫಾನ್ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.  ಇದೀಗ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಮನೆಯ ನಾಲ್ವರು ಸದಸ್ಯರು ಮಾತ್ರವಲ್ಲದೆ ಗರ್ಲ್ ಫ್ರೆಂಡ್ ನ್ನೂ ಸಾಯಿಸಿದ್ದಾನೆ. ಕೇವಲ ಎರಡೇ ಗಂಟೆ ಅವಧಿಯಲ್ಲಿ ಇಷ್ಟೊಂದು ಕೊಲೆಗಳನ್ನು ಮಾಡಿದ್ದಾನೆ.

ಹಣಕಾಸಿನ ವಿಚಾರಕ್ಕೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿಶೇಷವೆಂದರೆ ಅಫಾನ್ ತನ್ನ 13 ವರ್ಷದ ಸಹೋದರ ಅಫ್ಸಾನ್ ನ್ನು ಕೊಲೆ ಮಾಡಿದ್ದ. ಆತನ ದೇಹದ ಪಕ್ಕದಲ್ಲೇ 500 ರೂ.ಗಳ ನೋಟುಗಳೂ ಪತ್ತೆಯಾಗಿದೆ. ತಿರುವಂನಂತರಪುರಂನ ವೆಂಜಾರಮೂಡು ಮನೆಯಲ್ಲಿಯೇ ಎಲ್ಲರ ಮೃತದೇಹ ಪತ್ತೆಯಾಗಿದೆ. ಎಲ್ಲರ ತಲೆ, ಕುತ್ತಿಗೆ, ಮುಖಕ್ಕೆ ಗಾಯಗಳಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು, ಗರ್ಲ್ ಫ್ರೆಂಡ್ ಫರ್ಸಾನಾ ಟ್ಯೂಷನ್ ಗೆ ಹೋಗುವುದಾಗಿ ಹೇಳಿ ಆರೋಪಿ ಮನೆಗೆ ಬಂದಿದ್ದಳು. ವಿಪರ್ಯಾಸವೆಂದರೆ ಆಕೆಯನ್ನೂ ಬಿಡದ ಆರೋಪಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಿರುವನಂತರಪುರಂ: ಕೇರಳದಲ್ಲಿ ಬೆಚ್ಚಿಬೀಳಿಸುವ ಹತ್ಯಾಕಾಂಡವೊಂದು ನಡೆದಿದೆ. ಅಜ್ಜಿ, ಗರ್ಲ್ ಫ್ರೆಂಡ್ ಸೇರಿದಂತೆ ಪಾಪಿಯೊಬ್ಬ 5 ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.

23 ವರ್ಷದ ಅಫಾನ್ ಆರೋಪಿ. ಈತ ತನ್ನ ಅಜ್ಜಿ, 13 ವರ್ಷದ ಸಹೋದರ, ಗರ್ಲ್ ಫ್ರೆಂಡ್ ಸೇರಿದಂತೆ ಒಟ್ಟು 6 ಮಂದಿಯನ್ನು ಕೊಲೆಗೆ ಯತ್ನಿಸಿದ್ದಾನೆ. ಈ ಪೈಕಿ ಐವರು ಸಾವನ್ನಪ್ಪಿದ್ದು ತಾಯಿ ಮಾತ್ರ ಗಂಭೀರ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ.

ಸರಣಿ ಹತ್ಯೆ ಮಾಡಿದ ಬಳಿಕ ಆರೋಪಿ ಅಫಾನ್ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ