ಟಿ20 ವಿಶ್ವಕಪ್ ನಿಂದ ರಿಂಕು ಸಿಂಗ್ ಸ್ಥಾನ ಕಳೆದುಕೊಳ್ಳಲು ಕೆಕೆಆರ್ ತಂಡ ಕಾರಣ

Krishnaveni K

ಮಂಗಳವಾರ, 7 ಮೇ 2024 (20:46 IST)
ಕೋಲ್ಕೊತ್ತಾ: ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾ ಯುವ ಬ್ಯಾಟಿಗ ರಿಂಕು ಸಿಂಗ್ ಗೆ ಅವಕಾಶ ಸಿಗದೇ ಇರಲು ಐಪಿಎಲ್ ನ ಕೋಲ್ಕೊತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯೇ ಕಾರಣ ಎಂದು ಮಾಜಿ ಕ್ರಿಕೆಟಿಗ ಅಶೋಕ್ ಮಲ್ಹೋತ್ರಾ ಆಪಾದಿಸಿದ್ದಾರೆ.

ರಿಂಕು ಸಿಂಗ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಇದಕ್ಕಾಗಿ ಅವರ ಕುಟುಂಬಸ್ಥರೂ ಸಿಹಿ ತರಿಸಿ ಸಂಭ್ರಮಿಸಲು ತಯಾರಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ರಿಂಕು ಸಿಂಗ್ ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ.

 ಈ ಮೊದಲು ಟೀಂ ಇಂಡಿಯಾ ಪರ ಟಿ20 ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಿಂಕು ಸಿಂಗ್ ಈ ಬಾರಿ ಐಪಿಎಲ್ ನಲ್ಲಿ ಕೆಕೆಆರ್ ಪರ ಫಾರ್ಮ್ ಪ್ರದರ್ಶಿಸಿಲ್ಲ. ಕಳೆದ ಐಪಿಎಲ್ ಸೀಸನ್ ನಲ್ಲಿ ಬೆಸ್ಟ್ ಫಿನಿಶರ್ ಎನಿಸಿಕೊಂಡಿದ್ದ ರಿಂಕು ಈ ಬಾರಿ ಸಾಧಾರಣ ಪ್ರದರ್ಶನ ತೋರಿದ್ದಾರೆ.

ಅವರಿಗೆ ಕೆಕೆಆರ್ ಮ್ಯಾನೇಜ್ ಮೆಂಟ್ ಸಾಕಷ್ಟು ಅವಕಾಶ ನೀಡಿಲ್ಲ. ಈ ಕಾರಣಕ್ಕೇ ರಿಂಕುಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಕ್ಕಿಲ್ಲ. ಅದಕ್ಕೇ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಎಂದು ಅಶೋಕ್ ಮಲ್ಹೋತ್ರಾ ಆರೋಪಿಸಿದ್ದಾರೆ. ಆದರೆ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ರಿಂಕು ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ