ಮದುವೆಗಾಗಿ ರಜೆ ತೆಗೆದುಕೊಂಡ ಕೆಎಲ್ ರಾಹುಲ್
ರಾಹುಲ್ ಮತ್ತು ಅಥಿಯಾ ಜನವರಿ ಮೊದಲ ವಾರದಲ್ಲಿ ಮದುವೆಯಾಗಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಯೂ ನಡೆದಿದೆ. ಮುಂಬೈನಲ್ಲಿ ಮದುವೆ ನಡೆಯಲಿದೆ.
ಇದಕ್ಕಾಗಿ ರಾಹುಲ್ ಈಗಲೇ ಬಿಸಿಸಿಐ ಬಳಿ ಜನವರಿಯಲ್ಲಿ ತಾನು ಟೀಂ ಇಂಡಿಯಾಗೆ ಅಲಭ್ಯರಾಗಿರುವುದಾಗಿ ರಜೆ ಪಡೆದುಕೊಂಡಿದ್ದಾರೆ. ಇದಕ್ಕೆ ಬಿಸಿಸಿಐ ಕೂಡಾ ಸಮ್ಮತಿಸಿದೆ. ಹೀಗಾಗಿ ರಾಹುಲ್-ಅಥಿಯಾ ಮದುವೆ ನಡೆಯುವುದು ಪಕ್ಕಾ ಆಗಿದೆ.