ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಎಲ್ ರಾಹುಲ್ ಫಿಕ್ಸ್?

ಭಾನುವಾರ, 29 ಜುಲೈ 2018 (09:16 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾಗೆ ಈಗ ಬ್ಯಾಟಿಂಗ್ ಕ್ರಮಾಂಕ ಹೊಂದಿಸುವುದೇ ದೊಡ್ಡ ತಲೆನೋವಿನ ವಿಚಾರ.

ಎಲ್ಲರೂ ಪ್ರತಿಭಾವಂತರೇ. ಆದರೆ ಎಲ್ಲರೂ ಟಾಪ್ ಆರ್ಡರ್ ಗೇ ಸೂಕ್ತರು. ಹೀಗಾಗಿ ಯಾರಿಗೆ ಯಾವ ಕ್ರಮಾಂಕ ನೀಡುವುದು ಎನ್ನುವ ದೊಡ್ಡ ಸಮಸ್ಯೆ ವಿರಾಟ್ ಕೊಹ್ಲಿ ಎದುರಿಗಿದೆ.

ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ಕೆಎಲ್ ರಾಹುಲ್ ಅರ್ಧಶತಕ ಗಳಿಸಿದ್ದರು. ಹೀಗಾಗಿ ಶಿಖರ್ ಧವನ್ ಗೆ ಆರಂಭಿಕರಾಗಿ ಅವಕಾಶ ಕೊಟ್ಟರೆ ಕ್ರಿಕೆಟ್ ನ ವಾಲ್ ರಾಹುಲ್ ದ್ರಾವಿಡ್ ಅವರ ನೆಚ್ಚಿನ ಸ್ಥಾನವಾಗಿದ್ದ ಮೂರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿಯಬೇಕಾಗುತ್ತದೆ.

ಹಾಗಿದ್ದರೆ ದ್ರಾವಿಡ್ ನಂತರ ಭಾರತದ ಮತ್ತೊಬ್ಬ ವಾಲ್ ಎಂದೇ ಪ್ರತೀತಿಯಾಗಿರುವ ಚೇತೇಶ್ವರ ಪೂಜಾರ ನಾಲ್ಕನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯುವುದು ಅನಿವಾರ್ಯವಾಗುತ್ತದೆ. ಇದರಿಂದ ವಿರಾಟ್ ಕೊಹ್ಲಿ ಮತ್ತು ಐದು ಮತ್ತು ಅಜಿಂಕ್ಯಾ ರೆಹಾನೆಗೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಉಳಿದಂತೆ ಓರ್ವ ವಿಕೆಟ್ ಕೀಪರ್ ಮತ್ತು ನಾಲ್ವರು ಬೌಲರ್ ಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ