ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಟೀಂ ಇಂಡಿಯಾದಲ್ಲಂತೂ ಸ್ಥಾನ ಸಿಗುತ್ತಿಲ್ಲ. ಇದರ ಜೊತೆಗೆ ಅವರ ಜೆರ್ಸಿ ನಂಬರ್ ಕೂಡಾ ಬೇರೆಯವರ ಪಾಲಾಯ್ತು ಎಂದು ಅಭಿಮಾನಿಗಳು ಮರುಗಿದ್ದಾರೆ.
ಟಿ20 ವಿಶ್ವಕಪ್ ಗೆ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಗೂ ಕೆಎಲ್ ರಾಹುಲ್ ರನ್ನು ಕಡೆಗಣಿಸಲಾಗಿತ್ತು. ಏಕದಿನ ವಿಶ್ವಕಪ್ ನಲ್ಲಿ ತಂಡದ ಪ್ರಮುಖ ಆಟಗಾರನಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ರನ್ನು ತಂಡದಿಂದ ಕಡೆಗಣಿಸುತ್ತಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ರಿಷಬ್ ಪಂತ್ ರಿಂದಲೂ ರಾಹುಲ್ ಎಷ್ಟೋ ಬೆಸ್ಟ್ ಆಟಗಾರ. ಆದರೂ ಅವರು ಐಪಿಎಲ್ ವೇಳೆ ಕೋಚ್ ಹುದ್ದೆಯಲ್ಲಿ ರಾಜಕೀಯ ಒತ್ತಡವಿರುತ್ತದೆ ಎಂಬ ಹೇಳಿಕೆ ನೀಡಿದ್ದಕ್ಕೇ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಅಭಿಮಾನಿಗಳ ಆರೋಪವಾಗಿದೆ. ರಾಹುಲ್ ರನ್ನು ಕಡೆಗಣಿಸುತ್ತಿರುವುದಕ್ಕೆ ಬಿಸಿಸಿಐನಿಂದ ಸ್ಪಷ್ಟ ಕಾರಣ ಸಿಕ್ಕಿಲ್ಲ.
ಈ ನಡುವೆ ನಿನ್ನೆ ಪ್ರಧಾನಿ ಮೋದಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಜಯ್ ಶಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವುದರ ಗೌರವಾರ್ಥ ನಮೋ ಹೆಸರಿನ ಟೀಂ ಇಂಡಿಯಾ ಜೆರ್ಸಿ ಉಡುಗೊರೆಯಾಗಿ ನೀಡಿದ್ದರು. ಈ ಜೆರ್ಸಿ ನಂ.1 ಆಗಿದ್ದು, ಇದು ರಾಹುಲ್ ಜೆರ್ಸಿ ನಂಬರ್ ಆಗಿದೆ. ಹೀಗಾಗಿ ನೆಟ್ಟಿಗರು ಅಯ್ಯೋ.. ತಂಡದಲ್ಲಿ ಸ್ಥಾನದ ಜೊತೆಗೆ ರಾಹುಲ್ ಜೆರ್ಸಿ ನಂಬರ್ ಕೂಡಾ ಕಳೆದುಕೊಂಡರು ಎಂದು ತಮಾಷೆ ಮಾಡಿದ್ದಾರೆ.