ಅಭ್ಯಾಸದ ವೇಳೆ ಕೊಹ್ಲಿ-ಬಾಬರ್ ಅಜಂ ಮುಖಾಮುಖಿ’
ಪ್ರಸಕ್ತಿ ಕ್ರಿಕೆಟ್ ನಲ್ಲಿ ಇಬ್ಬರೂ ರನ್ ಗಳಿಸುವ ವಿಚಾರದಲ್ಲಿ ಪೈಪೋಟಿಯಲ್ಲಿದ್ದಾರೆ. ಒಬ್ಬರಿಗೊಬ್ಬರನ್ನು ಹೋಲಿಕೆ ಮಾಡಲಾಗುತ್ತದೆ. ಇದೀಗ ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಎರಡೂ ತಂಡಗಳು ಅಭ್ಯಾಸ ನಡೆಸುವಾಗ ಇಬ್ಬರು ಕ್ರಿಕೆಟ್ ದಿಗ್ಗಜರು ಪರಸ್ಪರ ಭೇಟಿಯಾಗಿದ್ದಾರೆ.
ಕೊಹ್ಲಿ ಮತ್ತು ಬಾಬರ್ ಪರಸ್ಪರ ಕೈಕುಲುಕಿ ಉಭಯ ಕುಶಲೋಪರಿ ನಡೆಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.