ಟಿ20 ಕ್ರಿಕೆಟ್ ಗೆ ಮಿಥಾಲಿ ರಾಜ್ ವಿದಾಯ?!

ಗುರುವಾರ, 7 ಫೆಬ್ರವರಿ 2019 (09:52 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ‍್ಯತೆಯಿದೆ.


ಈ ಮೊದಲು ಟಿ20 ವಿಶ್ವಕಪ್ ನಲ್ಲಿ ಅವರ ಮತ್ತು ಕೋಚ್ ನಡುವೆ ಭಿನ್ನಾಭಿಪ್ರಾಯವಾದ ಸಂದರ್ಭದಲ್ಲಿಯೇ ಅವರು ವಿದಾಯ ಹೇಳುತ್ತಾರೆಂಬ ವರದಿಯಾಗಿತ್ತು. ಆದರೆ ಇದೀಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿರುವ ಮಿಥಾಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಆಡಲಿದ್ದಾರೆ.

ಆದರೆ ಅದಾದ ಬಳಿಕ ಮಿಥಾಲಿ ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಸದ್ಯಕ್ಕೆ ಹರ್ಮನ್ ಪ್ರೀತ್ ಕೌರ್ ಟಿ20 ತಂಡದ ನಾಯಕಿ. ಇವರ ನಾಯಕತ್ವದಲ್ಲೇ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಗೆ ಸಜ್ಜಾಗಲಿದೆ. ಆದರೆ ಈ ತಂಡದಲ್ಲಿ ಮಿಥಾಲಿ ಸ್ಥಾನ ಪಡೆಯುವುದು ಅನುಮಾನ. ಹೀಗಾಗಿ ವಿದಾಯ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟು 85 ಟಿ20 ಪಂದ್ಯಗಳನ್ನಾಡಿರುವ ಮಿಥಾಲಿ 2,283 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ