ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡ ಮೇಲೆ ತಂಡದೊಳಗೇ ಅಸಮಾಧಾನವೆದ್ದಿದೆ ಎಂಬ ಮಾತು ಕೇಳಿಬರುತ್ತಿದೆ. ಅದೀಗ ಮತ್ತೊಮ್ಮೆ ಸಾಬೀತಾಗಿದೆ.
ನಿನ್ನೆಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೂಲದ ಮೊಹಮ್ಮದ್ ನಬಿಗೆ ಬೌಲಿಂಗ್ ಅವಕಾಶ ಸಿಕ್ಕಿಲ್ಲ. ಇದನ್ನು ಅಭಿಮಾನಿಯೊಬ್ಬರು ಇನ್ ಸ್ಟಾಗ್ರಾಂನಲ್ಲಿ ಪ್ರಶ್ನಿಸಿದ್ದರು. ಕೆಲವೊಮ್ಮೆ ನಾಯಕರ ನಿರ್ಧಾರಗಳು ಅಚ್ಚರಿ ನೀಡುತ್ತವೆ. ನಬಿಗೆ ಒಂದೇ ಒಂದು ಸಿಂಗಲ್ ಓವರ್ ಕೂಡಾ ಬೌಲಿಂಗ್ ಮಾಡಲು ಸಿಗಲಿಲ್ಲ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದರು.
ಇದನ್ನು ನಬಿ ತಮ್ಮ ಇನ್ ಸ್ಟಾ ಪುಟದಲ್ಲಿ ಶೇರ್ ಮಾಡಿದ್ದಾರೆ. ಆ ಮೂಲಕ ನಾಯಕ ಹಾರ್ದಿಕ್ ಮೇಲಿನ ಅಸಮಾಧಾನವನ್ನು ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಕೇವಲ ಈ ಪಂದ್ಯ ಮಾತ್ರವಲ್ಲ. ಕಳೆದ 4 ಪಂದ್ಯಗಳಲ್ಲಿ ಆಡಿದರೂ ನಬಿಗೆ ಕೇವಲ 6 ಓವರ್ ಅಷ್ಟೇ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿದೆ.
ಐಪಿಎಲ್ ನಲ್ಲಿ ನಬಿ ಇದುವರೆಗೆ ಮುಂಬೈಗಿಂತ ಮೊದಲು ಸನ್ ರೈಸರ್ಸ್ ಹೈದರಾಬಾದ್ ಪರವೂ ಆಡಿದ್ದಾರೆ. ಒಟ್ಟಾರೆ ಐಪಿಎಲ್ ವೃತ್ತಿ ಜೀವನದಲ್ಲಿ ಅವರು 7.14 ಸರಾಸರಿಯಂತೆ ಬೌಲಿಂಗ್ ಮಾಡಿದ್ದಾರೆ. ಹಾಗಿದ್ದರೂ ಈಗ ಮುಂಬೈ ತಂಡದಲ್ಲಿ ಕಡೆಗಣಿಸಲ್ಪಟ್ಟಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಈ ರೀತಿ ಬಹಿರಂಗವಾಗಿ ಪೋಸ್ಟ್ ಹಾಕಿಕೊಳ್ಳುವುದರಿಂದ ಅವರು ಮತ್ತಷ್ಟು ಹಾರ್ದಿಕ್ ಪಾಂಡ್ಯ ಅಸಮಾಧಾನಕ್ಕೆ ಗುರಿಯಾಗಿ ಸೈಡ್ ಲೈನ್ ಆಗುವ ಸಾಧ‍್ಯತೆಯೂ ಇಲ್ಲದಿಲ್ಲ.