ICC Awards: ಐಸಿಸಿ ಮಾಸಿಕ ಪ್ರಶಸ್ತಿ ರೇಸ್ ನಲ್ಲಿ ಆಸೀಸ್ ಆಟಗಾರರ ಜೊತೆ ಮೊಹಮ್ಮದ್ ಶಮಿ
ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ವೇಗಿ ಮೊಹಮ್ಮದ್ ಶಮಿ ಪ್ರಶಸ್ತಿ ರೇಸ್ ನಲ್ಲಿರುವ ಏಕೈಕ ಟೀಂ ಇಂಡಿಯಾ ಆಟಗಾರ. ವಿಶೇಷವೆಂದರೆ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪಡೆದರೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ.
ಮೊಹಮ್ಮದ್ ಶಮಿ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಪ್ರಶಸ್ತಿ ರೇಸ್ ನಲ್ಲಿದ್ದಾರೆ. ವಿಶ್ವಕಪ್ ನಲ್ಲಿ ದ್ವಿಶತಕ ಸಿಡಿಸಿದ್ದ ಗ್ಲೆನ್ ಮ್ಯಾಕ್ಸ್ ವೆಲ್, ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ನಾಮಿನೇಟ್ ಆಗಿರುವ ಇತರ ಇಬ್ಬರು ಆಟಗಾರರು.
ಮೊಹಮ್ಮದ್ ಶಮಿ ನವಂಬರ್ ನಲ್ಲಿ ವಿಶ್ವಕಪ್ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನವಂಬರ್ ನಲ್ಲಿ 12.06 ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. ಸೆಮಿಫೈನಲ್ ನಲ್ಲಿ ಭಾರತ ಗೆದ್ದಿದ್ದೇ ಶಮಿ ಮ್ಯಾಜಿಕ್ ಸ್ಪೆಲ್ ನಿಂದಾಗಿ.