ಮೊಹಮ್ಮದ್ ಶಮಿಗೆ ಮಿಸ್ ಆಗಲಿದೆ ಈ ದೊಡ್ಡ ಅವಕಾಶ

Krishnaveni K

ಮಂಗಳವಾರ, 12 ಮಾರ್ಚ್ 2024 (08:52 IST)
ಕೋಲ್ಕೊತ್ತಾ: ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂದಿನ ಸೆಪ್ಟೆಂಬರ್ ವರೆಗೂ ಸಕ್ರಿಯ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ. ಆದರೆ ಇದರಿಂದ ಅವರಿಗೆ ಬಹುದೊಡ್ಡ ಅವಕಾಶ ಮಿಸ್ ಆಗಲಿದೆ.

ಗಾಯಕ್ಕೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮೊಹಮ್ಮದ್ ಶಮಿ ಈಗ ಭಾರತಕ್ಕೆ ಮರಳಿದ್ದಾರೆ. ಆದರೆ ಅವರ ಗಾಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ ಅಪ್ ಡೇಟ್ ಎಲ್ಲರಿಗೂ ಶಾಕ್ ನೀಡಿದೆ. ಶಮಿ ಮುಂಬರುವ ಟಿ20 ವಿಶ್ವಕಪ್ ನಲ್ಲೂ ಆಡಲು ಸಮರ್ಥರಿರುವುದಿಲ್ಲ ಎಂದು ಜಯ್ ಶಾ ಹೇಳಿದ್ದಾರೆ.

ಇದು ಭಾರತಕ್ಕೆ ಮಾತ್ರವಲ್ಲ, ಮೊಹಮ್ಮದ್ ಶಮಿಗೂ ದೊಡ್ಡ ಅವಕಾಶವೊಂದು ಮಿಸ್ ಆದಂತೆ. ಕಳೆದ ಏಕದಿನ ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ ಗರಿಷ್ಠ ವಿಕೆಟ್ ಟೇಕರ್ ಆಗಿ ಹೀರೋ ಆಗಿದ್ದರು. ಆದರೆ ಫೈನಲ್ ಗೆಲ್ಲಲಾಗದೇ ಭಾರತ ತಂಡ ನಿರಾಸೆ ಅನುಭವಿಸಿತ್ತು. ಶಮಿ ಕೂಡಾ ತೀವ್ರ ದುಃಖಿತರಾಗಿದ್ದರು.

ಏಕದಿನ ವಿಶ್ವಕಪ್ ಫೈನಲ್ ಸೋಲಿನ ಕಹಿಯನ್ನು ಮರೆತು ಟಿ20 ವಿಶ್ವಕಪ್ ಗೆಲ್ಲಿಸಿಕೊಡಲು ಶಮಿಗೆ ಉತ್ತಮ ಅವಕಾಶ ಎದುರಾಗಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ನಲ್ಲೇ ಭಾಗಿಯಾಗಲು ಶಮಿಗೆ ಸಾಧ‍್ಯವಾಗುತ್ತಿಲ್ಲ ಎನ್ನುವುದು ತೀರಾ ನಿರಾಶಾದಾಯಕ ಸುದ್ದಿಯಾಗಿದೆ. ಜೂನ್ ತಿಂಗಳಲ್ಲಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ