ಸಿಟ್ಟಿನ ಕೈಲಿ ಬುದ್ಧಿ ಕೊಟ್ಟು ಫೈನಲ್ ಅವಕಾಶ ಕಳೆದುಕೊಂಡ ಡೆವೋನ್ ಕಾನ್ವೇ
ಪ್ರಮುಖ ಆಟಗಾರ ಡೆವನ್ ಕಾನ್ವೇ ಗಾಯಗೊಂಡು ವಿಶ್ವಕಪ್ ಫೈನಲ್ ಮತ್ತು ಭಾರತದ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಅವರ ಸ್ವಯಂಕೃತ ಅಪರಾಧದಿಂದ ಆದ ಗಾಯ. ಸೆಮಿಫೈನಲ್ ನಲ್ಲಿ ಔಟಾದ ಸಿಟ್ಟಿನಲ್ಲಿ ಬ್ಯಾಟ್ ಗೆ ಕೈ ಗುದ್ದಿದರು. ಪರಿಣಾಮ ಬೆರಳಿಗೆ ಗಾಯವಾಗಿದೆ.
ಇದರಿಂದಾಗಿ ಕಾನ್ವೇ ಕೈ ಮೂಳೆ ಮುರಿತಕ್ಕೊಳಗಾಗಿದೆ. ಪರಿಣಾಮ ಫೈನಲ್ ಆಡುವ ಸುವರ್ಣಾವಕಾಶವನ್ನೇ ಕಳೆದುಕೊಂಡಿದ್ದಾರೆ.