ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ 346 ಕ್ರಿಕೆಟಿಗರು ಹರಾಜಿಗೆ ಒಳಡಲಿದ್ದು, ಇವರಲ್ಲಿ ವಿದೇಶೀ ಆಟಗಾರರೇ ಭಾರತೀಯರಿಗಿಂತ ದುಬಾರಿಯಾಗಿದ್ದಾರೆ.
ಅದರಲ್ಲೂ ಶ್ರೀಲಂಕಾ, ನ್ಯೂಜಿಲೆಂಡ್ ನ ಆಟಗಾರರಿಗೆ ಭಾರತೀಯ ಆಟಗಾರರಿಗಿಂತಲೂ ಹೆಚ್ಚಿನ ಕನಿಷ್ಠ ಬೆಲೆ ನಿಗದಿಗೊಳಿಸಲಾಗಿದೆ. ಒಟ್ಟು 346 ಕ್ರಿಕೆಟಿಗರ ಪೈಕಿ 226 ಭಾರತೀಯ ಆಟಗಾರರಿದ್ದಾರೆ. ಇವರೆಲ್ಲಾ ಈ ಬಾರಿ ಹರಾಜಿಗೆ ಒಳಪಡಲಿದ್ದಾರೆ.
ಭಾರತದ ಪೈಕಿ ಜಯದೇವ್ ಉನಾದ್ಕಟ್ 1.5 ಕೋಟಿ ರೂ. ಮೂಲಧನ ಪಡೆದಿದ್ದು, ಇವರೇ ಗರಿಷ್ಠ ಬೆಲೆ ಪಡೆದಿರುವ ಆಟಗಾರರಾಗಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಯುವರಾಜ್ ಸಿಂಗ್, ವೃದ್ಧಿಮಾನ್ ಸಹಾ, ಮೊಹಮ್ಮದ್ ಶಮಿ, ಅಕ್ಸರ್ ಪಟೇಲ್ ಮುಂತಾದ ಪ್ರಮುಖ ಆಟಗಾರರು ಹರಾಜಿಗೊಳಪಡಲಿದ್ದಾರೆ.
ಲಂಕಾದ ಆಂಜಲೋ ಮ್ಯಾಥ್ಯೂಸ್, ಲಸಿತ್ ಮಾಲಿಂಗ, ನ್ಯೂಜಿಲೆಂಡ್ ನ ಬ್ರೆಂಡಮ್ ಮೆಕಲಮ್, ಕಾಲಿನ್ ಇನ್ ಗ್ರಾಮ್, ಇಂಗ್ಲೆಂಡ್ ನ ಕೋರೆ ಆಂಡರ್ಸನ್, ಕ್ರಿಸ್ ವೋಕ್ಸ್, ಸ್ಯಾಮ್ಯುವೆಲ್ ಕ್ಯುರೇನ್, ಶಾನ್ ಮಾರ್ಷ್, ಡಾರ್ಸಿ ಶಾರ್ಟ್ ಗರಿಷ್ಠ ಅಂದರೆ 2 ಕೋಟಿ ಮೂಲಧನ ಹೊಂದಿರುವ ದುಬಾರಿ ಆಟಗಾರರ ಪಟ್ಟಿಯಲ್ಲಿದ್ದಾರೆ. ಉಳಿದ ಆಟಗಾರರಿಗೆ 1.5 ಕೋಟಿ ರೂ. ಮತ್ತು 1 ಕೋಟಿ ರೂ. ಮೂಲಧನ ನಿಗದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ