ಆಸ್ಟ್ರೇಲಿಯಾಕ್ಕೆ ಬಂದ ಪಾಕ್ ಕ್ರಿಕೆಟಿಗರಿಗೆ ಅವಮಾನ: ಲಗೇಜ್ ಹೊರುವವರಿಗೂ ಗತಿಯಿಲ್ಲ

ಶನಿವಾರ, 2 ಡಿಸೆಂಬರ್ 2023 (10:20 IST)
Photo Courtesy: Twitter
ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲು ಕಾಂಗರೂ ನಾಡಿಗೆ ಬಂದಿಳಿದ ಪಾಕಿಸ್ತಾನ ಕ್ರಿಕೆಟಿಗರಿಗೆ ಒಂದು ರೀತಿಯಲ್ಲಿ ಅವಮಾನವಾಗಿದೆ.

ಇದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಉಡಾಫೆಯಿಂದ ಆಗಿರುವ ಎಡವಟ್ಟು. ಪಾಕ್ ಕ್ರಿಕೆಟಿಗರು ಕ್ಯಾನ್ ಬೆರಾಗೆ ಬಂದಿಳಿದಾಗ ಕ್ರಿಕೆಟಿಗರಿಗೆ ಲಗೇಜ್ ನ್ನು ಗೂಡ್ಸ್ ವಾಹನದಿಂದ ಇಳಿಸಲೂ ಜನರಿರಲಿಲ್ಲ. ಕೊನೆಗೆ ಪಾಕ್ ಕ್ರಿಕೆಟಿಗರೇ ಗೂಡ್ಸ್ ವಾಹನ ಏರಿ ತಮ್ಮ ಲಗೇಜ್ ಹೊರಗೆಳೆದು ತಾವೇ ಹೊತ್ತು ನಡೆಯುವ ಪರಿಸ್ಥಿತಿ ಎದುರಾಗಿದೆ.

ಸಾಮಾನ್ಯವಾಗಿ ವಿದೇಶ ಪ್ರಯಾಣ ಮಾಡಿದಾಗ ಆಯಾ ಕ್ರಿಕೆಟ್ ಸಂಸ್ಥೆಯೇ ಪ್ರವಾಸೀ ತಂಡದ ಲಗೇಜ್ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ಆದರೆ ಪಾಕ್ ಕ್ರಿಕೆಟಿಗರನ್ನು ಸ್ವಾಗತಿಸುವುದು ಬಿಡಿ, ಅವರ ಲಗೇಜ್ ಹೊರಲೂ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ವ್ಯವಸ್ಥೆ ಮಾಡಿರಲಿಲ್ಲ.

ಪಾಕ್ ಕ್ರಿಕೆಟಿಗರ ಬಗ್ಗೆ ಆಸ್ಟ್ರೇಲಿಯಾ ಈ ಪರಿಯ ಉಡಾಫೆ ಮಾಡಿದ್ದೇಕೆ ಎಂದು ತಿಳಿದುಬಂದಿಲ್ಲ. ಆದರೆ ಪಾಕ್ ಕ್ರಿಕೆಟಿಗರು ಲಗೇಜ್ ಇಳಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ