ಕೇಸರಿ ಶಾಲು ಹೊದೆಸಿ ಪಾಕ್ ಕ್ರಿಕೆಟಿಗರಿಗೆ ಹೈದರಾಬಾದ್ ನಲ್ಲಿ ಸ್ವಾಗತ
ಈ ವೇಳೆ ಪಾಕ್ ನಾಯಕ ಬಾಬರ್ ಅಜಮ್ ಹಾಗೂ ಇತರ ಕ್ರಿಕೆಟಿಗರಿಗೆ ವಿಮಾನ ನಿಲ್ದಾಣದಲ್ಲಿ ಭಾರೀ ಸ್ವಾಗತ ಸಿಕ್ಕಿದೆ. ಸ್ವತಃ ಪಾಕ್ ಕ್ರಿಕೆಟಿಗರು ತಮಗೆ ಸಿಕ್ಕ ಸ್ವಾಗತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಪಾಕ್ ನಾಯಕ ಬಾಬರ್ ಅಜಮ್ ಸೇರಿದಂತೆ ಇತರೆ ಕ್ರಿಕೆಟಿಗರಿಗೆ ಕೇಸರಿ ಶಾಲು ಹೊದೆಸಿ ಸನ್ಮಾನಿಸಿ ಭಾರತಕ್ಕೆ ಬರಮಾಡಿಕೊಳ್ಳಲಾಯಿತು. ನಾಳೆ ನ್ಯೂಜಿಲೆಂಡ್ ವಿರುದ್ಧ ಪಾಕ್ ವಿಶ್ವಕಪ್ ಅಭ್ಯಾಸ ಪಂದ್ಯವಾಡಲಿದೆ.