ಭಾರತದ ವಿರುದ್ಧ ಐಸಿಸಿ ಕಿವಿ ಚುಚ್ಚಿದ ಪಾಕ್ ಕ್ರಿಕೆಟ್ ಮಂಡಳಿ

ಗುರುವಾರ, 23 ಜುಲೈ 2020 (11:45 IST)
ದುಬೈ: ಈ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡಿಕೆ ಮಾಡಿ ಆ ಸಮಯದಲ್ಲಿ ಐಪಿಎಲ್ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿ ಮೇಲೆ ಪ್ರಭಾವ ಬೀರಿದೆ ಎಂಬ ಗುಮಾನಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಭಾರತದಲ್ಲಿ ನಡೆಯಬೇಕಿದ್ದ 2023 ರ ವಿಶ್ವಕಪ್ ಮುಂದೂಡಲು ಪ್ರಭಾವ ಬೀರಿದೆ ಎನ್ನಲಾಗಿದೆ.


ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಲು ಭಾರತ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ ಮುಂದೂಡಿಕೆ ಮಾಡಲು ಐಸಿಸಿ ಮೇಲೆ ಒತ್ತಡ ಹೇರಿತ್ತು ಎಂಬ ಮಾತು ಕೇಳಿಬರುತ್ತಿದೆ. ಇದು ಪಾಕ್ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ.

ಹೀಗಾಗಿ ತಾನೂ ಕೂಡಾ ಪಾಕಿಸ್ತಾನ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಸಲು 2023 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಏಕದಿನ ವಿಶ್ವಕಪ್ ಕೂಟದ ದಿನಾಂಕ ಬದಲಾವಣೆ ಮಾಡಲು ಐಸಿಸಿ ಮೇಲೆ ಒತ್ತಡ ಹೇರಿ ಯಶಸ್ಸು ಕಂಡಿದೆ ಎನ್ನಲಾಗಿದೆ. 2023 ರ ಏಕದಿನ ವಿಶ್ವಕಪ್ ಫೆಬ್ರವರಿ-ಮಾರ್ಚ್ ವೇಳೆಗೆ ನಡೆಯಬೇಕಿತ್ತು.

ಆದರೆ ಆ ಸಮಯದಲ್ಲಿ ತನ್ನ ಪಿಎಸ್ ಎಲ್ ಕ್ರಿಕೆಟ್ ಲೀಗ್ ನಡೆಸಲು ಪಾಕ್ ಮಂಡಳಿ ದಿನಾಂಕ ಬದಲಾವಣೆ ಮಾಡಲು ಒತ್ತಡ ಹೇರಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ