ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ಹರಾರೆಯಲ್ಲಿ ನಡೆಯುತ್ತಿರುವ ಚೊಚ್ಚಲ ಏಕ ದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡದ 168 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಮುಟ್ಟುವ ಮೂಲಕ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಲೋಕೇಶ್ ರಾಹುಲ್ ಅವರ 100 ರನ್ ಮತ್ತು ಅಂಬಾಟಿ ರಾಯ್ಡು ಅವರ 62 ರನ್‌ಗಳೊಂದಿಗೆ ಒಟ್ಟು 162 ರನ್ ಜತೆಯಾಟದಿಂದ ನಿರಾಯಾಸವಾಗಿ ಜಿಂಬಾಬ್ವೆ ಸ್ಕೋರಿನ ಗಡಿಯನ್ನು ದಾಟಿ 173 ರನ್ ಗಳಿಸಿತು.
ಕರುಣ್ ನಾಯರ್ ಅವರು ಆರಂಭದಲ್ಲೇ ಚತಾರಾ ಬೌಲಿಂಗ್‌ನಲ್ಲಿ ರಾಜಾಗೆ ಕ್ಯಾಚಿತ್ತು ಔಟಾದ ಬಳಿಕ ಲೋಕೇಶ್ ರಾಹುಲ್ ಮತ್ತು ರಾಯುಡು ಭದ್ರವಾಗಿ ನಿಂತು ಆಡಿ ಜಿಂಬಾಬ್ವೆ ಫೀಲ್ಡರುಗಳಿಗೆ ಬೆವರಿಳಿಸಿದರು. ಜಿಂಬಾಬ್ವೆ ಬೌಲರುಗಳು ಅವರಿಬ್ಬರನ್ನು ಔಟ್ ಮಾಡುವ ಪ್ರಯತ್ನ ವಿಫಲವಾಗಿ ಸುಲಭದಲ್ಲಿ ಸೋಲನ್ನಪ್ಪಿದೆ. ಮೊದಲಿಗೆ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ ಜೋಡಿ ನಂತರ ಬಿರುಸಿನ ಹೊಡೆತಗಳಿಗೆ ಆರಂಭಿಸಿತು.