ಏಷ್ಯಾ ಕಪ್ ಕ್ರಿಕೆಟ್: ಭಾರತ-ಪಾಕ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ

ಭಾನುವಾರ, 10 ಸೆಪ್ಟಂಬರ್ 2023 (17:06 IST)
Photo Courtesy: Twitter
ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇದಕ್ಕೆ ಮೊದಲು ಲೀಗ್ ಪಂದ್ಯದಲ್ಲೂ ಮಳೆ ಅಡ್ಡಿಯಾಗಿತ್ತು.

ಇಂದು ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಜೋಡಿ ಭರ್ಜರಿ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್ ಗೆ 121 ರನ್ ಗಳನ್ನು ಪೇರಿಸಿದರು. ಈ ಪೈಕಿ ರೋಹಿತ್ 56 ರನ್ ಗಳಿಸಿ ಮೊದಲನೆಯವರಾಗಿ ಔಟಾದರೆ ಅವರ ಹಿಂದೆಯೇ 58 ರನ್ ಗಳಿಸಿ ಗಿಲ್ ಕೂಡಾ ಪೆವಿಲಿಯನ್ ಗೆ ಸೇರಿಕೊಂಡರು.

ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜೋಡಿ ಎಚ್ಚರಿಕೆಯ ಆಟಕ್ಕೆ ಕೈ ಹಾಕಿದರು. ರಾಹುಲ್ 28 ಎಸೆತಗಳಿಂದ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದರೆ ಕೊಹ್ಲಿ 8 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಮೊತ್ತ 24.1 ಓವರ್ ಗಳಲ್ಲಿ 2 ವಿಕೆಟ್ ಗೆ 147 ರನ್ ಆಗಿದ್ದಾಗ ಮಳೆ ಆರಂಭವಾಯಿತು. ಇದೀಗ ಆಟ ಸ್ಥಗಿತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ