ಏಷ್ಯಾ ಕಪ್ ಕ್ರಿಕೆಟ್: ಇಂದು ಮಳೆ ಬಂದರೆ ಭಾರತ-ಪಾಕ್ ಪಂದ್ಯ ಏನಾಗುತ್ತದೆ?

ಭಾನುವಾರ, 10 ಸೆಪ್ಟಂಬರ್ 2023 (09:10 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಸೂಪರ್ ಫೋರ್ ಹಂತದ ಪಂದ್ಯ ನಡೆಯಲಿದೆ.

ಆದರೆ ಈ ಪಂದ್ಯಕ್ಕೆ ಮಳೆ ಬಂದರೆ ಏನಾಗುತ್ತದೆ? ಇಂದಿನ ಪಂದ್ಯಕ್ಕೆ ಮಾತ್ರ ಮೀಸಲು ದಿನ ಕಾಯ್ದಿರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಬೇಡಿಕೆ ಗಮನಿಸಿ ಈ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

ಅದರಂತೆ ಇಂದು ಮಳೆ ಬಂದರೆ ಸೋಮವಾರ ಮೀಸಲು ದಿನ ಪಂದ್ಯ ನಡೆಯಲಿದೆ. ಹೀಗಾಗಿ ಇಂದಿನ ಟಿಕೆಟ್ ಗಳನ್ನು ನಾಳೆಯೂ ಬಳಸಿಕೊಳ್ಳಬಹುದು. ಒಂದು ವೇಳೆ ನಾಳೆಯೂ ಮಳೆ ಅಡ್ಡಿಯಾದರೆ ಅಂಕ ಹಂಚಿಕೊಳ್ಳಬೇಕಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ