ಪಾಕಿಸ್ತಾನದಿಂದ ಹುಷಾರಾಗಿರಿ: ಭಾರತಕ್ಕೆ ಎಚ್ಚರಿಕೆ ನೀಡಿ ಶೊಯೇಬ್ ಅಖ್ತರ್

ಭಾನುವಾರ, 10 ಸೆಪ್ಟಂಬರ್ 2023 (09:20 IST)
Photo Courtesy: Twitter
ಕೊಲೊಂಬೋ: ಏಷ್ಯಾ ಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಸೂಪರ್ ಫೋರ್ ಪಂದ್ಯ ನಡೆಯಲಿದ್ದು ಇದಕ್ಕೆ ಮೊದಲು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯ ವೀಕ್ಷಿಸಲು ಕೊಲೊಂಬೋಗೆ ಬಂದಿಳಿದ ಬಳಿಕ ಶೊಯೇಬ್ ಅಖ್ತರ್ ಪಾಕಿಸ್ತಾನದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಲೀಗ್ ಹಂತದ ಪಂದ್ಯದಲ್ಲಿ ಪಾಕ್ ಬೌಲಿಂಗ್ ಎದುರು ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟಿಗರು ತಡಬಡಾಯಿಸಿದ್ದರು. ಇಂದು ಮತ್ತೆ ಅದೇ ತಪ್ಪು ಪುನರಾವರ್ತನೆಯಾಗದಂತೆ ರೋಹಿತ್ ಪಡೆ ಎಚ್ಚರವಹಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ