ವಿವಾದಾತ್ಮಕ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್

ಭಾನುವಾರ, 10 ಸೆಪ್ಟಂಬರ್ 2023 (09:40 IST)
ಬೆಂಗಳೂರು: ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮೊನಚು ಕಾಮೆಂಟ್ ಗಳ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

ಇದೀಗ ಬಿಸಿಸಿಐ ವಿರುದ್ಧವೇ ಅವರು ಅಸಮಧಾನ ಹೊರಹಾಕಿದ್ದಾರೆ. ವಿಶ್ವಕಪ್ ಟಿಕೆಟ್ ಹಂಚಿಕೆ ಸಮರ್ಪಕವಾಗಿಲ್ಲ ಎಂಬುದು ವೆಂಕಿ ಆರೋಪವಾಗಿತ್ತು.

ಇದರ ಬೆನ್ನಲ್ಲೇ ಅವರು ಟ್ವಿಟರ್ ನಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದೇ ಒಬ್ಬ ಭ್ರಷ್ಟ ವ್ಯಕ್ತಿಯಿಂದ ಇಡೀ ಸಂಸ್ಥೆಗೇ ಭ್ರಷ್ಟ ಎಂಬ ಕೆಟ್ಟ ಹೆಸರು ಬರುತ್ತದೆ. ಅದು ಸಣ್ಣ ಮಟ್ಟದಲ್ಲಿ ಅಲ್ಲ, ದೊಡ್ಡ ಮಟ್ಟದಲ್ಲಿ ಎಂದು ಬರೆದುಕೊಂಡಿದ್ದಾರೆ. ಅವರ ಈ ಟ್ವೀಟ್ ಬಿಸಿಸಿಐಗೆ ಕೊಟ್ಟ ಟಾಂಗ್ ಎಂದು ನೆಟ್ಟಿಗರು ಕಾಮೆಂಟ್ ಮಾಡಲು ಶುರು ಮಾಡಿದ್ದರು. ಇದರ ಬೆನ್ನಲ್ಲೇ ವೆಂಕಟೇಶ‍್ ಪ್ರಸಾದ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ