ವಿರಾಟ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ: ಏನಿದರ ವಿಶೇಷತೆ?

ಭಾನುವಾರ, 10 ಸೆಪ್ಟಂಬರ್ 2023 (09:47 IST)
ಕೊಲೊಂಬೋ: ಏಷ್ಯಾ ಕಪ್ ಆಡಲು ಶ್ರೀಲಂಕಾದಲ್ಲಿರುವ ವಿರಾಟ್ ಕೊಹ್ಲಿಗೆ ಲಂಕಾ ಯುವ ಕ್ರಿಕೆಟಿಗರೊಬ್ಬರು ಬೆಳ್ಳಿಯ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ.

ಕೊಹ್ಲಿ ಲಂಕಾದ ಸ್ಥಳೀಯ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಸ್ಥಳೀಯ ಕ್ರಿಕೆಟಿಗ ಕೃಶಾಂತ್ ಎಂಬವರು ಅವರಿಗೆ ಬೆಳ್ಳಿಯ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ನೀಡಿದ ಕೊಹ್ಲಿ ನಿಜಕ್ಕೂ ಮನಸೋತಿದ್ದಾರೆ.

ಏನಿದರ ವಿಶೇಷತೆ ಗೊತ್ತಾ? ಈ ಬೆಳ್ಳಿಯ ಬ್ಯಾಟ್ ನಲ್ಲಿ ಕೊಹ್ಲಿ ಇದುವರೆಗೆ ಸಿಡಿಸಿರುವ ಎಲ್ಲಾ ಶತಕಗಳ ವಿವರಗಳನ್ನು ಕೆತ್ತಲಾಗಿದೆ. ಈ ಉಡುಗೊರೆ ನೋಡಿದ ಕೊಹ್ಲಿ ನಿಜಕ್ಕೂ ಅಚ್ಚರಿಗೊಂಡಿದ್ದಾರೆ. ಕೃಶಾಂತ್ ಕೊಹ್ಲಿಯ ಬಹುದೊಡ್ಡ ಅಭಿಮಾನಿಯಂತೆ. ಇದೇ ಕಾರಣಕ್ಕೆ ಕೊಹ್ಲಿ ವಿಶೇಷ ಉಡುಗೊರೆ ನೀಡಿ ಗೌರವಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ