ಕೊನೆಗೂ ರೋಹಿತ್ ಶರ್ಮಾ-ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಕೋಚ್ ರವಿಶಾಸ್ತ್ರಿ

ಬುಧವಾರ, 11 ಸೆಪ್ಟಂಬರ್ 2019 (09:46 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಆಂತರಿಕ ತಿಕ್ಕಾಟವಿದೆ ಎಂದು ಮಾಧ್ಯಮಗಳು ವರದಿ ಮಾಡಿದಾಗಲೆಲ್ಲಾ ಬಿಸಿಸಿಐ ಸಹಿತ ಎಲ್ಲರೂ ನಿರಾಕರಿಸುತ್ತಲೇ ಬಂದಿದ್ದರು.


ಆದರೆ ಈಗ ಕೋಚ್ ರವಿಶಾಸ್ತ್ರಿ ಇಬ್ಬರ ನಡುವೆ ಅಭಿಪ್ರಾಯ ವ್ಯತ್ಯಾಸವಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಇದನ್ನೇ ವೈಮನಸ್ಯ ಎಂದು ಹೇಳಲಾಗದು ಎಂದೂ ಹೇಳಿದ್ದಾರೆ.

‘ಕಳೆದ ಐದು ವರ್ಷಗಳಿಂದ ನಾನು ಈ ಹುಡುಗರನ್ನು ನೋಡುತ್ತಿದ್ದೇನೆ. ಎಲ್ಲರೂ ತಮ್ಮ ತಂಡದ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂದು ನನಗೆ ಗೊತ್ತು. ಇದೆಲ್ಲಾ ನಾನ್ ಸೆನ್ಸ್. 15 ಆಟಗಾರರು ಇರುವಾಗ ಅಭಿಪ್ರಾಯ ಬೇಧವಿರುವುದು ಸಹಜ. ಅದೇ ರೀತಿ ಇಬ್ಬರ ನಡುವೆ ಇರಬಹುದು. ಆದರೆ ಅದು ಜಗಳ ಎಂದರ್ಥವಲ್ಲ. ಒಂದು ವೇಳೆ ಹಾಗಿದ್ದರೆ ರೋಹಿತ್ ಯಾಕೆ ವಿಶ್ವಕಪ್ ನಲ್ಲಿ 5 ಶತಕ ಸಿಡಿಸುತ್ತಿದ್ದರು? ಕೊಹ್ಲಿ ಯಾಕೆ ಈಗ ಮಾಡುತ್ತಿರುವ ಕೆಲಸ ಮಾಡುತ್ತಿದ್ದರು?’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ