500 ರ ಸಾಧನೆಗೆ ಆರ್.ಅಶ್ವಿನ್ ಮುಂದಿನ ಟೆಸ್ಟ್ ವರೆಗೆ ಕಾಯಲೇ ಬೇಕು

Krishnaveni K

ಮಂಗಳವಾರ, 6 ಫೆಬ್ರವರಿ 2024 (08:11 IST)
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ಅಶ್ವಿನ್ ಇನ್ನು ಒಂದು ವಿಕೆಟ್ ಕಬಳಿಸಿದ್ದರೂ ಹೊಸ ದಾಖಲೆ ಮಾಡುತ್ತಿದ್ದರು.

ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ಕಬಳಿಸಿದ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 499 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಆದರೆ ಇನ್ನೊಂದು ವಿಕೆಟ್ ಪಡೆದಿದ್ದರೂ ಅವರು 500 ವಿಕೆಟ್ ಪಡೆದ ಅಪರೂಪದ ಸಾಧಕರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದರು. ಆದರೆ ಅವರಿಗೆ ಇನ್ನೊಂದು ವಿಕೆಟ್ ಸಿಗಲೇ ಇಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆ ದಾಖಲೆ ಮಾಡಲು ಅವರು ಇನ್ನೂ ಒಂದು ಪಂದ್ಯ ಕಾಯಬೇಕಾಗಿದೆ.

ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 500 ಪ್ಲಸ್ ವಿಕೆಟ್ ಪಡೆದ ಬೌಲರ್ ಗಳು
ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅನಿಲ್ ಕುಂಬ್ಳೆಯವರದ್ದಾಗಿದೆ. ಅವರು 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ ಕಬಳಿಸಿದ್ದರು. ಇದೀಗ ಅಶ್ವಿನ್ 500 ಪ್ಲಸ್ ವಿಕೆಟ್ ಸಾಧನೆ ಮಾಡಲು ಒಂದೇ ಹೆಜ್ಜೆ ಹಿಂದಿದ್ದಾರೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ಆ ದಾಖಲೆ ಮಾಡುವುದು ಖಚಿತ.

ಆದರೆ ಅನಿಲ್ ಕುಂಬ್ಳೆಗೆ ಹೋಲಿಸಿದರೆ ಅಶ್ವಿನ್ ಅತೀ ಕಡಿಮೆ ಟೆಸ್ಟ್ ನಲ್ಲಿ ಈ ಸಾಧನೆ ಮಾಡಲಿದ್ದಾರೆ. ಅಶ್ವಿನ್ ಇದುವರೆಗೆ 97 ಪಂದ್ಯವನ್ನಷ್ಟೇ ಆಡಿದ್ದಾರೆ. ಹೀಗಾಗಿ ಅತೀ ಕಡಿಮೆ ಪಂದ್ಯಗಳಿಂದ 500 ಪ್ಲಸ್ ವಿಕೆಟ್ ಸಾಧನೆ ಮಾಡಿದ ದಾಖಲೆ ಅವರದ್ದಾಗಲಿದೆ. ಆ ಐತಿಹಾಸಿಕ ಕ್ಷಣ ರಾಜಕೋಟ್ ಮೈದಾನದಲ್ಲಿ ಫೆಬ್ರವರಿ 15 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ವೇಳೆ ನಡೆಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ