ವೈಮನಸ್ಯವಿತ್ತೇ ಎನ್ನುವ ಹಾಗೆ ನಡೆದುಕೊಂಡ ರವೀಂದ್ರ ಜಡೇಜಾ-ಧೋನಿ

ಮಂಗಳವಾರ, 30 ಮೇ 2023 (08:40 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಗೆದ್ದ ಬಳಿಕ ಸಿಎಸ್ ಕೆ ಆಟಗಾರ ರವೀಂದ್ರ ಜಡೇಜಾ ಮತ್ತು ನಾಯಕ ಧೋನಿ ಪರಸ್ಪರ ಭಾವುಕರಾಗಿ ಅತ್ತು ಸಂಭ್ರಮಿಸಿದ ಪರಿ ನೋಡಿ ಇಬ್ಬರ ನಡುವೆ ವೈಮನಸ್ಯವಿದೆ ಎಂದವರೆಲ್ಲಾ ನಾಚುವಂತೆ ಮಾಡಿದೆ.

ಐಪಿಎಲ್ 2023 ರ ಪಂದ್ಯದ ವೇಳೆ ಜಡೇಜಾ ಮತ್ತು ಧೋನಿ ನಡುವೆ ವೈಮನಸ್ಯವೇರ್ಪಟ್ಟಿದೆ. ಇದೇ ಕಾರಣಕ್ಕೆ ಜಡೇಜಾ ‘ಕರ್ಮ ರಿಟರ್ನ್ಸ್’ ಎಂದು ಪೋಸ್ಟ್ ಮಾಡಿದ್ದು ಎಂದು ಸುದ್ದಿಯಾಗಿತ್ತು.

ಆದರೆ ನಿನ್ನೆ ಚೆನ್ನೈ ಗೆಲುವಿನ ರನ್ ಗಳಿಸಿದ ಜಡೇಜಾ ಸೀದಾ ಓಡಿ ಬಂದು ಡಗೌಟ್ ನಲ್ಲಿದ್ದ ಧೋನಿಯನ್ನು ಅಪ್ಪಿಕೊಂಡರು. ಧೋನಿ ಅವರನ್ನು ಅಪ್ಪಿಕೊಂಡು ಗಳ ಗಳನೆ ಅತ್ತರು. ಗೆಲುವಿನ ಸಂಭ್ರಮದಲ್ಲಿ ಮಾತನಾಡಿರುವ ಜಡೇಜಾ ಈ ಗೆಲುವನ್ನು ಧೋನಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಇನ್ನು, ಜಡೇಜಾ ಪತ್ನಿ ಮೈದಾನದಲ್ಲಿ ಧೋನಿ ಎದುರು ಕಣ್ಣೀರು ಹಾಕಿ ಸಂತೋಷ ಹಂಚಿಕೊಂಡಿದ್ದಾರೆ. ಈ ಎಲ್ಲಾ ಘಟನೆಗಳ ಮೂಲಕ ತಮ್ಮ ನಡುವಿನ ವೈಮನಸ್ಯದ ಸುದ್ದಿಗಳೆಲ್ಲಾ ಸುಳ್ಳು ಎಂದು ಇಬ್ಬರೂ ಸಾಬೀತುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ