ಆರ್ ಸಿಬಿ ಬೇಡವೆಂದು ಕೈ ಬಿಟ್ಟ ಮ್ಯಾಕ್ಸ್ ವೆಲ್ ಖರೀದಿಗೆ ಪೈಪೋಟಿಗೆ ಬಿದ್ದ ಫ್ರಾಂಚೈಸಿಗಳು

Krishnaveni K

ಮಂಗಳವಾರ, 13 ಆಗಸ್ಟ್ 2024 (15:06 IST)
ಮುಂಬೈ: ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಕೈ ಬಿಡುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಅವರನ್ನು ಖರೀದಿಸಲು ಇತರೆ ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ.

ಕಳೆದ ಐಪಿಎಲ್ ಸೀಸನ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ಪರ ಕೆಲವೇ ಪಂದ್ಯಗಳನ್ನು ಆಡಿದ್ದರು. ಆಡಿದ ಅಷ್ಟೂ ಪಂದ್ಯಗಳಲ್ಲಿ ಅವರದ್ದು ತೀರಾ ಕಳಪೆ ಪ್ರದರ್ಶನವಾಗಿತ್ತು. ಹೀಗಾಗಿ ಈ ಬಾರಿ ಹರಾಜು ಪ್ರಕ್ರಿಯೆಗೆ ಮುನ್ನ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ ಕೈ ಬಿಡಲಿದೆ.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಲೀಸ್ ಮಾಡಬೇಕು, ಯಾರನ್ನು ಖರೀದಿ ಮಾಡಬೇಕು ಎಂದು ಲೆಕ್ಕಾಚಾರರ ಶುರು ಮಾಡಿದೆ. ಇದೀಗ ಆರ್ ಸಿಬಿ ಕೈ ಬಿಟ್ಟ ಮ್ಯಾಕ್ಸ್ ವೆಲ್ ಗೆ ಬೇರೆ ಮೂರು ಫ್ರಾಂಚೈಸಿಗಳಿಂದ ಭರ್ಜರಿ ಬೇಡಿಕೆ ಬಂದಿದೆ ಎನ್ನಲಾಗಿದೆ.

ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮ್ಯಾಕ್ಸ್ ವೆಲ್ ರನ್ನು ಖರೀದಿಸಲು ಆಸಕ್ತಿ ಹೊಂದಿವೆಯಂತೆ. ಹಾಗಿದ್ದರೂ ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಈ ಬಾರಿ ಅವರಿಗೆ ದೊಡ್ಡ ಮೊತ್ತ ಸಿಗುವುದು ಅನುಮಾನವಾಗಿದೆ. ಈ ಬಾರಿ ಬಿಸಿಸಿಐ ನಾಲ್ಕರ ಬದಲು ಆರು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ