ಈ ಸ್ಟಾರ್ ಕ್ರಿಕೆಟಿಗನಿಗೂ ಕೊಕ್ ಕೊಡಲಿದೆಯಂತೆ ಆರ್ ಸಿಬಿ

Krishnaveni K

ಮಂಗಳವಾರ, 30 ಜುಲೈ 2024 (17:10 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ಆಟಗಾರರನ್ನು ರಿಲೀಸ್ ಮಾಡಲಿದೆ ಎಂಬ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದೆ. ಮೂಲಗಳ ಪ್ರಕಾರ ಆರ್ ಸಿಬಿ ಈ ಬಾರಿ ಈ ಸ್ಟಾರ್ ಆಟಗಾರನಿಗೆ ಕೊಕ್ ನೀಡಲಿದೆಯಂತೆ. ಅವರು ಯಾರು ನೋಡೋಣ.

ಈ ಬಾರಿ ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ರನ್ನು ಕೈ ಬಿಡಲಿದೆ ಎಂದು ಈಗಾಗಲೇ ಸುದ್ದಿಯಿತ್ತು. ಅದರ ನಡುವೆಯೇ ಈಗ ಮತ್ತೊಬ್ಬ ಸ್ಟಾರ್ ಆಟಗಾರನ ಹೆಸರು ಕೇಳಿಬರುತ್ತಿದೆ. ಅವರು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್  ವೆಲ್.

ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್ ವೆಲ್ ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಆಡುವುದಕ್ಕಿಂತ ಹೆಚ್ಚು ಬೆಂಚ್ ಕಾಯಿಸಿದ್ದೇ ಹೆಚ್ಚು. ಅವರ ಆಟದ ಬಗ್ಗೆ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಈ ಬಾರಿ ಮೆಗಾ ಹರಾಜಿನಲ್ಲಿ ಮ್ಯಾಕ್ಸ್ ವೆಲ್ ತಂಡದಿಂದ ಕಿಕ್ ಔಟ್ ಆಗುವ ಸಾಧ್ಯತೆಯಿದೆ.

ಈ ಬಾರಿ ಆರ್ ಸಿಬಿ ಹೊಸ ನಾಯಕನ ಹುಡುಕಾಟದಲ್ಲಿದ್ದು, ಕೆಎಲ್ ರಾಹುಲ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಅದರ ಹೊರತಾಗಿ ತಂಡದಲ್ಲಿ ಮ್ಯಾಕ್ಸ್ ವೆಲ್ ರನ್ನೂ ಹೊರಗಟ್ಟಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ಆರ್ ಸಿಬಿ ಬ್ಯಾಟಿಂಗ್ ಸಂಪೂರ್ಣವಾಗಿ ಬದಲಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ