ಆರ್ ಸಿಬಿ ಗೆಲುವಿಗೆ ಟಾರ್ಗೆಟ್ ಫಿಕ್ಸ್ ಮಾಡಿರುವ ಹೊಸ ನಾಯಕ ಫಾ ಡು ಪ್ಲೆಸಿಸ್

ಭಾನುವಾರ, 27 ಮಾರ್ಚ್ 2022 (09:17 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತೀ ಬಾರಿಯೂ ಕಪ್ ನಮ್ದೇ ಎಂಬ ಭರವಸೆಯೊಂದಿಗೆ ಕಣಕ್ಕಿಳಿಯುತ್ತದೆ. ಈ ಬಾರಿ ಹೊಸ ನಾಯಕನ ಆಗಮನವಾಗಿರುವುದರಿಂದ ಅದೃಷ್ಟ ಬದಲಾಗಬಹುದೇ ಎಂಬ ವಿಶ್ವಾಸ ಅಭಿಮಾನಿಗಳದ್ದು.

ಇನ್ನು, ನೂತನವಾಗಿ ಆರ್ ಸಿಬಿ ತಂಡ ಸೇರಿಕೊಂಡು ನಾಯಕರಾಗಿರುವ ಫಾ ಡು ಪ್ಲೆಸಿಸ್ ತಮ್ಮ ತಂಡದ ಯಶಸ್ಸಿಗೆ ಸೂತ್ರ ಹಾಕಿಕೊಂಡಿದ್ದಾರಂತೆ. ಅವರ ರೂಪುರೇಷೆಯಂತೇ ತಂಡ ಈ ಬಾರಿ ಕಾರ್ಯನಿರ್ವಹಿಸಲಿದೆ ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದ.ಆಫ್ರಿಕಾ ತಂಡದ ನಾಯಕನಾಗಿ ಫಾ ಡು ಕಾರ್ಯವೈಖರಿಯನ್ನು ಹಲವು ಬಾರಿ ಮೆಚ್ಚಿಕೊಂಡಿದ್ದೆ. ಈಗ ಅದೇ ರೀತಿ ಇಲ್ಲಿಯೂ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ