ಚೆನ್ನೈ: ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಅಗತ್ಯವಿದ್ದಾಗಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿ 197 ರನ್ ಗಳ ಗೆಲುವಿನ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಲು ಸಿಎಸ್ ಕೆ ಸ್ಪೋಟಕ ಬ್ಯಾಟಿಂಗ್ ಅಗತ್ಯವಿತ್ತು. ಆದರೆ ಸಿಎಸ್ ಕೆ ಅಗ್ರಕ್ರಮಾಂಕ ಕೈಕೊಟ್ಟಿತು. ಅದರಲ್ಲೂ ಋತುರಾಜ್ ಗಾಯಕ್ ವಾಡ್ ಶೂನ್ಯಕ್ಕೇ ಔಟಾದರು.
ತಂಡದ ಪರಿಸ್ಥಿತಿ ಏನೇ ಇದ್ದರೂ ಧೋನಿ ಮಾತ್ರ ಎಂದಿನಂತೆ ಕಳೆ ಕ್ರಮಾಂಕದಲ್ಲೇ ಬ್ಯಾಟಿಂಗ್ ಗೆ ಬಂದಿದ್ದು ಎಲ್ಲರ ಟೀಕೆಗೆ ಗುರಿಯಾಯಿತು. ನಿನ್ನೆಯ ಪಂದ್ಯದಲ್ಲಿ ಧೋನಿ ಕೊನೆಯ ಒಂದೆರಡು ಓವರ್ ಬಾಕಿಯಿರುವಾಗ ಬ್ಯಾಟಿಂಗ್ ಗೆ ಬಂದು 2 ಸಿಕ್ಸರ್, 3 ಬೌಂಡರಿ ಸಹಿತ 16 ಓವರ್ ನಲ್ಲಿ ಅಜೇಯ 30 ರನ್ ಸಿಡಿಸಿದರು.
ತಂಡ ಆಗಲೇ ಸೋಲಿನ ಸುಳಿಯಲ್ಲಿತ್ತು. ಈ ಸಂದರ್ಭದಲ್ಲಿ ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಆಗ ಬ್ಯಾಟಿಂಗ್ ಗೆ ಬಂದು ಸಿಕ್ಸ್, ಬೌಂಡರಿ ಗಳಿಸಿ ಏನು ಪ್ರಯೋಜನ? ಇದರ ಬದಲು ಸ್ವಲ್ಪ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಇದೇ ಇನಿಂಗ್ಸ್ ಆಡಿದ್ದರೆ ತಂಡಕ್ಕೆ ಗೆಲುವಿನ ಭರವಸೆಯಾದರೂ ಬರುತ್ತಿತ್ತು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.