ಚೆನ್ನೈ: ಐಪಿಎಲ್ ಕೂಟದಲ್ಲಿ ಇಂಡಿಯಾ-ಪಾಕಿಸ್ತಾನ್ ಲೆವೆಲ್ ನ ಪಂದ್ಯವೆಂದರೆ ಅದು ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಪಂದ್ಯ. ನಿನ್ನೆ ಈ ಎರಡು ತಂಡಗಳ ನಡುವಿನ ಪಂದ್ಯವನ್ನು ಆರ್ ಸಿಬಿ 50 ರನ್ ಗಳಿಂದ ಗೆದ್ದುಕೊಂಡಿದೆ. ಇದಾದ ಬಳಿಕ ಸಿಎಸ್ ಕೆ ಫ್ಯಾನ್ಸ್ ಗೆ ಆರ್ ಸಿಬಿ ಫ್ಯಾನ್ಸ್ ಹಾವಳಿ ಜೋರಾಗಿದೆ.
ನಿನ್ನೆ ಪಂದ್ಯಕ್ಕೆ ಮುನ್ನ ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು. ಆರ್ ಸಿಬಿ ಕಪ್ ಗೆಲ್ಲುವುದು ನನಗೆ ಇಷ್ಟವಿಲ್ಲ. ಆದರೆ ಆರ್ ಸಿಬಿಯಂತಹ ತಂಡ ಐಪಿಎಲ್ ನಲ್ಲಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಇದೀಗ ಆರ್ ಸಿಬಿ ಗೆದ್ದ ಮೇಲೆ ಅಂಬಟಿ ರಾಯುಡು ಸೋಷಿಯಲ್ ಮೀಡಿಯಾ ಪುಟ ತೆರೆಯದಷ್ಟು ಕಾಮೆಂಟ್ ಗಳ ಹಾವಳಿಯಾಗುತ್ತಿದೆ.
ಇನ್ನು, ನಿನ್ನೆಯ ಪಂದ್ಯಕ್ಕೆ ಸಿಎಸ್ ಕೆ ಅಭಿಮಾನಿಗಳು ಆರ್ ಸಿಬಿಯನ್ನು ಅಣಕವಾಡಲು ಲಾಲಿ ಪಾಪ್ ಹಿಡಿದುಕೊಂಡು ಮೈದಾನಕ್ಕೆ ಬಂದಿದ್ದರು. ಹೀಗಾಗಿ ಇದೇ ವಿಚಾರವನ್ನಿಟ್ಟುಕೊಂಡು ಆರ್ ಸಿಬಿ ಫ್ಯಾನ್ಸ್ ಇನ್ನು ಮನೆಗೆ ಹೋಗುವಾಗ ಲಾಲಿ ಪಾಪ್ ತಿನ್ಕೊಂಡು ಹೋಗಿ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು, ಪಂದ್ಯ ಮುಗಿದ ಬಳಿಕ ಮೈದಾನದ ಹೊರಗೆ ಸಿಎಸ್ ಕೆ ಅಭಿಮಾನಿಗಳ ಗುಂಪಿನ ನಡುವೆ ಏಕಾಂಗಿಯಾಗಿ ಒಬ್ಬ ಆರ್ ಸಿಬಿ ಅಭಿಮಾನಿ ಕೆಂಪು ಬಾವುಟ ಹಿಡಿದು ಗೆಲುವು ಸಂಭ್ರಮಿಸುವ ವಿಡಿಯೋ ವೈರಲ್ ಆಗಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 196 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಸಿಎಸ್ ಕೆ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಸತತ ಎರಡೂ ಪಂದ್ಯಗಳನ್ನು ಗೆದ್ದು ಆರ್ ಸಿಬಿ ಅಭಿಮಾನಿಗಳ ಭರವಸೆ ಹೆಚ್ಚಿಸಿದೆ.