RCB vs PBKS:ಆರ್‌ಸಿಬಿ ಆಟಗಾರರ ಬ್ಯಾಟಿಂಗ್‌ ಬಗ್ಗೆ ವೀರೇಂದ್ರ ಸೆಹ್ವಾಗ್ ಟೀಕೆ

Sampriya

ಶನಿವಾರ, 19 ಏಪ್ರಿಲ್ 2025 (14:58 IST)
Photo Credit X
ಬೆಂಗಳೂರು: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ಮುಜುಗರದ ಸೋಲು ಅನುಭವಿಸಿದ ನಂತರ ಭಾರತದ ಮಾಜಿ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ ಆಕ್ರೋಶ ಹೊರಹಾಕಿದರು.

ಪ್ರತಿ ತಂಡಕ್ಕೆ 14 ಓವರ್‌ಗಳ ಸ್ಪರ್ಧೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ ಕಳೆದುಕೊಂಡು 95 ರನ್‌ ಗಳಿಸಿತು.

ಅದಲ್ಲದೆ ಟಿಮ್ ಡೇವಿಡ್‌ ಅವರು 26 ಎಸೆತಗಳಲ್ಲಿ 50ರನ್‌ ಗಳಿಸಿ ಆರ್‌ಸಿಬಿಗೆ ನೆರವಾದರು. ತವರಿನಲ್ಲಿ ಆರ್‌ಸಿಬಿ ಅನುಭವಿಸಿದ ಹೀನಾಯ ಸೋಲು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು.

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರೆಸಿದೆ.

PBKS ಇನ್ನೂ 11 ಎಸೆತಗಳು ಬಾಕಿಯಿರುವಾಗ ಐದು ವಿಕೆಟ್‌ಗಳೊಂದಿಗೆ  ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿತು.

ಇದು ನಡೆಯುತ್ತಿರುವ IPL 2025ರಲ್ಲಿ ಸ್ವದೇಶದಲ್ಲಿ RCB ಯ ಮೂರನೇ ಸೋಲು. ಕಳಪೆ ಬ್ಯಾಟಿಂಗ್‌ ಪ್ರದರ್ಶನವನ್ನು ವೀಕ್ಷಿಸಿದ ವೀರೇಂದ್ರ ಸೆಹ್ವಾಗ್, PBKS ವಿರುದ್ಧ ಯಾವುದೇ ಯೋಜನೆಯಿಲ್ಲದೆ, ತಾಳ್ಮೆಯಿಲ್ಲದೆ, ಅಸಡ್ಡೆ ಪ್ರದರ್ಶನದಿಂದ ಆರ್‌ಸಿಬಿ ಸೋಲು ಅನುಭವಿಸಿತು ಎಂದರು.

ತವರಿನಲ್ಲಿ ಆಟವಾಡುವ ವೇಳೆ ಒಬ್ಬ ಬ್ಯಾಟರ್ ಕೂಡಾ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಪ್ರದರ್ಶನ ತೋರಲಿಲ್ಲ. ಪ್ರತಿ ಬಾರಿಯೂ ಆರ್‌ಸಿಬಿ ತಮ್ಮ ತವರಿನ ಪಂದ್ಯಾಟದಲ್ಲಿ ಅದೇ ತಪ್ಪನ್ನು ಮಾಡುತ್ತಿದೆ ಎಂದರು.

ಆರ್‌ಸಿಬಿ ಕಳಪೆ ಬ್ಯಾಟಿಂಗ್ ಮಾಡಿತು. ಅವರೆಲ್ಲರೂ ಔಟಾಗಲು ಅಜಾಗರೂಕ ಹೊಡೆತಗಳನ್ನು ಆಡಿದರು. ಒಬ್ಬ ಬ್ಯಾಟರ್ ಉತ್ತಮ ಬಾಲ್‌ಗೆ ಔಟಾಗಲಿಲ್ಲ. ಕನಿಷ್ಠ ಒಬ್ಬ ಬ್ಯಾಟರ್ ಸಾಮಾನ್ಯ ಜ್ಞಾನವನ್ನು ಬಳಸಬೇಕಾಗಿತ್ತು. ಅವರ ಕೈಯಲ್ಲಿ ವಿಕೆಟ್‌ಗಳಿದ್ದರೆ, ಅವರು 14 ಓವರ್‌ಗಳಲ್ಲಿ 110 ಅಥವಾ 120 ರನ್‌ಗಳನ್ನು ತಲುಪಬಹುದಿತ್ತು, ಅದು ಅವರಿಗೆ ಹೋರಾಡುವ ಅವಕಾಶವನ್ನು ನೀಡುತ್ತಿತ್ತು ಎಂದು ಆರ್‌ಸಿಬಿ ಪ್ರದರ್ಶನದ ಬಗ್ಗೆ ಟೀಕೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ