ಯಜುವೇಂದ್ರ ಚಾಹಲ್ ಗೆ ಉದುರಿದ ಹಲ್ಲು ಹುಡುಕು ಎಂದ ರೋಹಿತ್ ಶರ್ಮಾ!

ಬುಧವಾರ, 25 ಜುಲೈ 2018 (09:33 IST)
ಮುಂಬೈ: ಇತ್ತೀಚೆಗೆ ಕ್ರಿಕೆಟಿಗರು ಮೈದಾನದಲ್ಲಿ ಮಾತ್ರವಲ್ಲ, ಟ್ವಿಟರ್ ನಲ್ಲೂ ಫನ್ನಿ ಟ್ವೀಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಸಾಮಾನ್ಯವಾಗಿದೆ. ಈಗ ರೋಹಿತ್ ಶರ್ಮಾ ಅಂತಹದ್ದೇ ಒಂದು ಟ್ವೀಟ್ ಮಾಡಿದ್ದಾರೆ.

ಯಜುವೇಂದ್ರ ಚಾಹಲ್ ಬರ್ತ್ ಡೇಗೆ ಶುಭಕೋರಿದ ರೋಹಿತ್ ಶರ್ಮಾ ಅದರ ಜತೆಗೆ ನಿನ್ನ ಕಳೆದುಹೋದ ಹಲ್ಲನ್ನು ಬೇಗನೇ ಹುಡುಕಿಕೋ ಎಂದು ತಮಾಷೆ ಮಾಡಿದ್ದಾರೆ.

‘ಹ್ಯಾಪಿ ಬರ್ತ್ ಡೇ ಗೆಳೆಯ. ಇದೇ ರೀತಿ ನಿನ್ನ ಸ್ಪಿನ್ ಮೂಲಕ ಎಲ್ಲರನ್ನೂ ಬೆರಗಾಗಿಸುತ್ತಿರು. ಅದರ ಜತೆಗೆ ನಿನ್ನ ಆ ಕಳೆದುಹೋಗಿರುವ ಹಲ್ಲನ್ನು ಹುಡುಕುವೆ ಎಂಬ ವಿಶ್ವಾಸ ನನಗಿದೆ’ ಎಂದು ಕಾಲೆಳೆದಿದ್ದಾರೆ.

ಇದಕ್ಕೂ ಮೊದಲು ಚಾಹಲ್ ರೋಹಿತ್ ಪತ್ನಿ ಕೈಲಿ ಕಿವಿ ಹಿಂಡಿಸಿಕೊಂಡಿದ್ದರು. ನಿನ್ನನ್ನು ಮಿಸ್ ಮಾಡುತ್ತಿದ್ದೇನೆ ಎಂದು ಚಾಹಲ್ ರೋಹಿತ್ ಫೋಟೋಗೆ ಕಾಮೆಂಟ್ ಮಾಡಿದ್ದಕ್ಕೆ ರೋಹಿತ್ ಪತ್ನಿ ರಿತಿಕಾ ಅವರೀಗ ನನ್ನವರು ಎಂದು ಟಾಂಗ್ ಕೊಟ್ಟಿದ್ದರು. ಈಗ ರೋಹಿತ್ ಕೈಲಿ ತಮಾಷೆಗೊಳಗಾಗಿದ್ದಾರೆ ಚಾಹಲ್.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ