ನ್ಯೂಯಾರ್ಕ್ ನಲ್ಲಿ ಕಳಪೆ ಸೌಲಭ್ಯ, ಆಹಾರದ ಬಗ್ಗೆ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಅಸಮಾಧಾನ

Krishnaveni K

ಶುಕ್ರವಾರ, 31 ಮೇ 2024 (11:17 IST)
Photo Credit: X
ನ್ಯೂಯಾರ್ಕ್: ಟಿ20  ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾಗಿಯಾಗಲು ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಕಳಪೆ ಪ್ರಾಕ್ಟೀಸ್ ಸೌಲಭ್ಯ ಮತ್ತು ಆಹಾರದ ಬಗ್ಗೆ ತಗಾದೆ ಎತ್ತಿದೆ.

ಕಳೆದ ನಾಲ್ಕೈದು ದಿನಗಳಿಂದ ರೋಹಿತ್ ಶರ್ಮಾ ಪಡೆ ನ್ಯೂಯಾರ್ಕ್ ನಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಆಹಾರವೂ ಗುಣಮಟ್ಟದ್ದಾಗಿಲ್ಲ. ನಮಗೆ ಒಗ್ಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಗಳನ್ನು ಬಿಸಿಸಿಐ ಆಯೋಜಕ ಐಸಿಸಿ ಗಮನಕ್ಕೆ ತಂದಿದೆ ಎಂದು ವರದಿಯಾಗಿದೆ. ಇಲ್ಲಿ ಭಾರತ ಐರ್ಲೆಂಡ್, ಪಾಕಿಸ್ತಾನ ಮತ್ತು ಅತಿಥೇಯ ಅಮೆರಿಕಾ ವಿರುದ್ಧ ಮಹತ್ವದ ಪಂದ್ಯವಾಡಬೇಕಿದೆ. ಆದರೆ ಅದಕ್ಕೆ ತಕ್ಕ ಸೌಲಭ್ಯ ಒದಗಿಸಿಲ್ಲ ಎಂದು ಟೀಂ ಇಂಡಿಯಾ ಅಸಮಾಧಾನಗೊಂಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ