ವಿರಾಟ್ ಕೊಹ್ಲಿ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್
ನಿನ್ನೆಯ ದಿನದಾಟದಲ್ಲಿ ಕೊಹ್ಲಿ 36 ರನ್ ಗಳಿಸಿ ಔಟಾಗಿದ್ದಾರೆ. ಔಟಾಗಿ ಪೆವಿಲಿಯನ್ ಗೆ ಮರಳುವಾಗ ಆಸೀಸ್ ಪ್ರೇಕ್ಷಕರು ಕೊಹ್ಲಿಯನ್ನು ಮೂದಲಿಸಿದ್ದಾರೆ. ಇದು ಕೊಹ್ಲಿಯ ಗಮನಕ್ಕೂ ಬಂದಿದ್ದು ಪೆವಿಲಿಯನ್ ನತ್ತ ಸಾಗುತ್ತಿದ್ದ ಕೊಹ್ಲಿ ಹಿಂದೆ ಬಂದು ತಮ್ಮನ್ನು ಹೀಯಾಳಿಸುತ್ತಿದ್ದ ಪ್ರೇಕ್ಷಕರತ್ತ ಉರಿಗಣ್ಣು ಬಿಟ್ಟಿದ್ದಾರೆ. ಈ ವೇಳೆ ಆಸೀಸ್ ಸಿಬ್ಬಂದಿಗಳನ್ನು ಅವರನ್ನು ಸಮಾಧಾನಪಡಿಸಿ ಒಳಗೆ ಕಳುಹಿಸಿದ್ದಾರೆ.
ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಅಭಿಮಾನಿಗಳು ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಆ ಪೈಕಿ ಸಂಜನಾ ಕೂಡಾ ಒಬ್ಬರು. ಕೊಹ್ಲಿಯ ಫೋಟೋ ಪ್ರಕಟಿಸಿ ನಮ್ಮೆಲ್ಲರ ಬೆಂಬಲ ಭಾರತೀಯ ಸ್ಟಾರ್ ವಿರಾಟ್ ಕೊಹ್ಲಿ ಮೇಲಿದೆ ಎಂದು ಬರೆದುಕೊಂಡಿದ್ದಾರೆ.